ಬಳ್ಳಾರಿ

ತಾಯಿ ಮತ್ತು ಮಗು ಕಾಣೆ ಪ್ರಕರಣ ದಾಖಲು

ತಾಯಿ ಮತ್ತು ಮಗು ಕಾಣೆ ಪ್ರಕರಣ ದಾಖಲು

ಬಳ್ಳಾರಿ 13: ಸಂಡೂರು ತಾಲೂಕಿನ ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯ ಮರುಟ್ಲ ಗ್ರಾಮದಲ್ಲಿ ವಾಸಿಸುತ್ತಿದ್ದ 29ವರ್ಷದ ಸರಸ್ವತಿ ಎಂಬ ಮಹಿಳೆ ತನ್ನ 09 ತಿಂಗಳ ಮಗುವಿನೊಂದಿಗೆ ಡಿ.10ರಂದು ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಠಾಣೆಯ ತನಿಖಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಡಿ.10ರಂದು ಬೆಳಗ್ಗೆ 10ಕ್ಕೆ ಮರುಟ್ಲ ಗ್ರಾಮದ ತನ್ನ ತವರು ಮನೆಯಿಂದ 9ತಿಂಗಳ ತನ್ನ ಮಗುವನ್ನು ಕರೆದುಕೊಂಡು ಹೋದವಳು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.   

ಕಾಣೆಯಾದ ತಾಯಿಯ ಗುರುತಿನ ಚಹರೆ: 5.5ಅಡಿ ಎತ್ತರ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು, ಎಡತುಟಿಯ ಅಂಚಿನಲ್ಲಿ ಸಣ್ಣ ಕಪ್ಪು ಮಚ್ಚೆ ಇರುತ್ತದೆ. ಹಳದಿ ಕಲರ್ ಟಾಪ್, ಬಿಳಿ ಬಣ್ಣದ ಪ್ಯಾಂಟ್, ಕೆಂಪು ವ್ಹೇಲ್ ಮತ್ತು ಮೈಮೇಲೆ ರೋಸ್ ಕಲರ್ ಸ್ವೆಟರ್ ಧರಿಸಿರುತ್ತಾಳೆ.  

ಕಾಣೆಯಾದ ಮಗುವಿನ ಗುರುತಿನ ಚಹರೆ: ಕೆಂಪು ಬಣ್ಣದ ಶರ್ಟ್‌ ಹಾಗೂ ಕೇಸರಿ ಬಣ್ಣದ ಚಡ್ಡಿ ಧರಿಸಿರುತ್ತದೆ. 

ಕಾಣೆಯಾದ ತಾಯಿ ಹಾಗೂ ಮಗುವಿನ ಮಾಹಿತಿ ದೊರೆತಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.ಸಂ.08392-258100, ತೋರಣಗಲ್ಲು ಪೊಲೀಸ್ ರಾಣೆಯ ದೂ.ಸಂ.08395-250100, ಕೂಡ್ಲಿಗಿ ಡಿ.ಎಸ್‌.ಪಿ ಅವರು ಮೊ.ಸಂ.9480803022, ಸಂಡೂರು ವೃತ್ತದ ಸಿ.ಪಿ.ಐ ಅವರ ಮೊ.ಸಂ.9480803036 ಹಾಗೂ ತೋರಣಗಲ್ಲು ಪೊಲೀಸ್ ರಾಣೆಯ ಪಿ.ಎಸ್‌.ಐ ಅವರ ಮೊ.ಸಂ.9480803062ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. 


ಸುದ್ದಿ ಓದಿ