ಬಳ್ಳಾರಿ

ತಾಯಿ ಮಗ ಕಾಣೆ: ಪ್ರಕರಣ ದಾಖಲು

ತಾಯಿ ಮಗ ಕಾಣೆ: ಪ್ರಕರಣ ದಾಖಲು

ಬಳ್ಳಾರಿ 06: ಸಿರುಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 25 ವರ್ಷದ ಮಲ್ಲೇಶ್ವರಿ ಎಂಬ ಮಹಿಳೆ ಮತ್ತು ಮಗುವಿನೊಂದಿಗೆ ಆ.3 ರಂದು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಸಿರುಗುಪ್ಪ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸಪೆಕ್ಟರ್ (ಕಾಸು) ಕೆ.ರಂಗಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಣೆಯಾದ ಮಹಿಳೆಯ ಚಹರೆ ಗುರುತು: 5.2 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಬಲಗೈ ಮೇಲೆ ಅಚ್ಚೆ ಹಾಕಿಸಿರುತ್ತಾರೆ. ಕನ್ನಡ ಮಾತನಾಡಲು ಬರುತ್ತದೆ. ಹೂಗಳ ಡಿಸೈನ್ ಸೀರೆ ಧರಿಸಿರುತ್ತಾರೆ. 

ಕಾಣೆಯಾದ ಮಹಿಳೆಯ ಮಾಹಿತಿ ದೊರೆತಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಪಿ.ಎಸ್‌.ಐ. ದೂ.ಸಂ:08396-220333, ಸಿರುಗುಪ್ಪ ವೃತ್ತದ ಸಿ.ಪಿ.ಐ. ದೂ:08396-220003, ಬಳ್ಳಾರಿ ಗ್ರಾಮೀಣ ಉಪ-ವಿಭಾಗದ ಡಿ.ಎಸ್‌.ಪಿ. ದೂ:08392-276000, ಬಳ್ಳಾರಿ ಎಸ್‌.ಪಿ. ಕಚೇರಿ ದೂ:08392-258400ಗೆ ಸಂಪರ್ಕಿಸಲು ಕೊರಿದೆ. 

ಸುದ್ದಿ ಓದಿ