ಮುಂಡರಗಿ

ಜಮೀನು, ಖಾಲಿ ಜಾಗದಲ್ಲಿ ಹೆಚ್ಚು ಮರಗಳನ್ನು ಬೆಳೆಸಬೇಕು : ಸಿ. ಎಸ್‌. ಅರಸನಾಳ

ಜಮೀನು, ಖಾಲಿ ಜಾಗದಲ್ಲಿ ಹೆಚ್ಚು ಮರಗಳನ್ನು ಬೆಳೆಸಬೇಕು : ಸಿ. ಎಸ್‌. ಅರಸನಾಳ

ಮುಂಡರಗಿ 26 : ಮರಗಳಿದ್ದರೆ ಬರೀ ಮಳೆಯಾಗುತ್ತದೆ ಎಂತಲ್ಲ, ಮರಗಳಿಂದ ಪ್ರಾಣವಾಯು, ಹಕ್ಕಿಪಕ್ಷಿಗಳಿಗೆ ಆಶ್ರಯ ಹಾಗೂ ಮಣ್ಣಿನ ಸವಕಳಿಗೆ ನಿಯಂತ್ರಣ ಮಾಡುವುದಲ್ಲದೇ ಸುಮಾರು 21 ಉಪಯೋಗಗಳನ್ನು ಪಡೆಯಬಹುದು. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಜಮೀನು ಹಾಗೂ ಖಾಲಿ ಜಾಗದಲ್ಲಿ ಹೆಚ್ಚು ಮರಗಳನ್ನು ಬೆಳೆಸಲು ಮುಂದಾಗಬೇಕು ಎಂದು ಪರಿಸರವಾದಿ ಹಾಗೂ ವರದಿಗಾರರಾದ ಸಿ. ಎಸ್‌. ಅರಸನಾಳ ಹೇಳಿದರು.   

ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ನಡೆಯುತ್ತಿರುವ ಶ್ರಾವಣ ಮಾಸದ ಅಂಗವಾಗಿ ತಿಂಗಳು ಪರ್ಯಂತ ಮಹಾತ್ಮರ ಜೀವನ ದರ್ಶನ ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆ, ಹಾರೈಕೆ, ಜಾಗೃತಿ ಕುರಿತು ಅವರು ಮಾತನಾಡಿದರು.ಈ ಹಿಂದೆ 1950 ರಕ್ಕಿಂತ ಮೊದಲು ಅರಣ್ಯ ಇಲಾಖೆ ನಮ್ಮ ಸರ್ಕಾರದಲ್ಲಿ ಇದ್ದಿಲ್ಲ. ಯಾವಾಗ ಅರಣ್ಯ ಸಂಪತ್ತಿನ ಪ್ರಮಾಣ 33ಅಕ್ಕಿಂತ ಕಡಿಮೆಯಾಯಿತೊ ಅವಾಗ ಸರ್ಕಾರ ಎಚ್ಚೆತ್ತುಕೊಂಡು, ಅಕ್ಕೊಂದು ಇಲಾಖೆ ತಯಾರಿಸಿ ಒಬ್ಬರನ್ನು ಮಂತ್ರಿಗಳನ್ನು ಆಯೋಜಿಸಿದರು. ಅಂದಿನಿಂದ ಅರಣ್ಯ ಸಂಪತ್ತನ್ನು ರಕ್ಷಣೆ ಮಾಡಲು ಪ್ರಾರಂಭಿಸಿದರು. ಆ ಮೂಲಕ ಅರಣ್ಯ ರಕ್ಷಣೆ ಕುರಿತು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ನೂತನವಾಗಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ನಿರ್ಮಲಾ ನಾಗರಾಜ ಕೊರ್ಲಹಳ್ಳಿ, ಉಪಾಧ್ಯಕ್ಷರಾಗಿ ಆಯ್ಕೆಯಾದ ನಾಗೇಶ ಹುಬ್ಬಳ್ಳಿಯವರನ್ನು ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾ ಶಿವಯೋಗಿಗಳವರು ಆರ್ಶಿವಾದ ಮಾಡಿ ಸನ್ಮಾನಿಸಿದರು. ಪ್ರವಚನಕಾರ ನಾಗಬೂಷಣ ಶ್ರೀಗಳು ಶ್ರೀಮಠದ 8ನೇ ಪೀಠಾಧಿಪತಿ ಸೋರಟೂರ ಪೂಜ್ಯರ ಕುರಿತು ಪ್ರವಚನ ನೀಡಿದರು. ನಂತರ ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು. ಆಡಳಿತಾಧಿಕಾರಿ ಡಾ. ಬಿ.ಜಿ.ಜವಳಿ, ಮುಖಂಡ ನಾಗರಾಜ ಕೊರ್ಲಹಳ್ಳಿ, ಪ್ರವಚನ ಸಮಿತಿ ಅಧ್ಯಕ್ಷ ಮಂಜುನಾಥ ಮುಧೋಳ, ಕಾರ್ಯದರ್ಶಿ ನಾಗರಾಜ ಮುಖ್ಯೆ, ಸಹ ಕಾರ್ಯದರ್ಶಿ ಮುತ್ತು ಬಳ್ಳಾರಿ, ಖಜಾಂಚಿ ಮಂಜುನಾಥ ಶಿವಶೆಟ್ಟಿ,  ಎಸ್‌.ಆರಿ​‍್ರತ್ತಿ, ಶಂಭುಲಿಂಗನಗೌಡ ಮಠದ, ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು. 


ಸುದ್ದಿ ಓದಿ