100ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
ಲೋಕದರ್ಶನ ವರದಿ
ಮುಂಡಗೋಡ:ತಾಲೂಕಿನ ಕಾತೂರ ಗ್ರಾ.ಪಂ. ಅಧ್ಯಕ್ಷೆ ಸೇರಿದಂತೆ 100ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಸಚಿವ ಶಿವರಾಮ ಹೆಬ್ಬಾರ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರೆ್ಡಯಾದರು.
ಗ್ರಾ.ಪಂ.ಅಧ್ಯಕ್ಷೆ ರೇಣುಕಾ ಮಾಯಣ್ಣನವರ, ಸದಸ್ಯರಾದ ರಾಜು ರಾವಳ, ಸಂಜು ಕೀರ್ತೆಪ್ಪನವರ, ಲಲಿತಾ ಆಡಿನವರ, ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯ ಫಕೀರ್ಪ ಯಲ್ಲಾಪುರ, ಯಲ್ಲಪ್ಪಗೌಡ ಪಾಟೀಲ, ಚಂದ್ರಶೇಖರ ಮುಡಸಾಲಿ, ಮೌಲಾಲಿ ದರ್ಗಾ, ಮೈಲಾರ್ಪ ಜಾಡರ, ಕೊಂಡು, ನಾವು, ಬಾಬು, ಲಕ್ಕು, ಮೌಲಾಲಿ ಜಾವೀದ್, ಅಬ್ದುಲ್ಖಾದರ, ನನ್ನೆಸಾಬ್, ಜಾಫರ್, ಮಕಬುಲ್, ಮುನ್ನಾ, ಮೌಲಾಲಿ ಮರಗಡಿ, ನಾಗರಾಜ, ಜಾನು, ರಾಮು, ಬಾಗುಬಾಯಿ, ಸಗ್ಗುಬಾಯಿ, ಬಮ್ಮುಬಾಯಿ, ನಕಲುಬಾಯಿ, ಗೌಳಿ ಸಮುದಾಯ ಮತ್ತು ಮುಸ್ಲಿಂ ಸಮುದಾಯದ ಹಲವಾರು ಮುಖಂಡರು ಬಿಜೆಪಿಗೆ ಸೇರೆ್ಡಯಾದರು.
ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರೆ್ಡಗೊಂಡ ಕಾರ್ಯಕರ್ತರಿಗೆ ಸಚಿವ ಶಿವರಾಮ ಹೆಬ್ಬಾರ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡು ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಬೂತ್ಗಳನ್ನು ಬಲಪಡಿಸುವಂತೆ ಕರೆ ನೀಡಿದರು.