ಮುಂಗಾರು ವಿಳಂಬ: ಮಳೆಗಾಗಿ ಪ್ರಾರ್ಥನೆ, ಜಲಾಭಿಷೇಕ
ಮುಂಗಾರು ವಿಳಂಬ: ಮಳೆಗಾಗಿ ಪ್ರಾರ್ಥನೆ, ಜಲಾಭಿಷೇಕ
ದೇವರಹಿಪ್ಪರಗಿ 16: ಪ್ರತಿ ವರ್ಷದಂತೆ ಈ ವರ್ಷವೂ ಸಹ ಆಷಾಢ ಮಾಸದ ಪ್ರಯುಕ್ತ ಪಟ್ಟಣದ ಹುಡೆದ ಮಹಾಲಕ್ಷ್ಮಿ ಜಾತ್ರೆಯ ಅಂಗವಾಗಿ ಹಾಗೂ ಈ ವರ್ಷವೂ ಮುಂಗಾರು ವಿಳಂಬವಾಗಿದ್ದು, ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಇನ್ನಾದರೂ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ ನೂರಾರು ಭಕ್ತರು ಪಟ್ಟಣದ ಐತಿಹಾಸಿಕ ಕಲ್ಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಗುರುವಾರ ಮುಂಜಾನೆ ಹುಡೇದ ಮಹಾಲಕ್ಷ್ಮಿ ದೇವಸ್ಥಾನಲ್ಲಿ ವಿಶೇಷ ಪೂಜೆ, ಜಲಾಭಿಷೇಕ ನೆರವೇರಿಸಿದ ಭಕ್ತರು ವರುಣ ಆಗಮನಕ್ಕಾಗಿ ಪ್ರಾರ್ಥಿಸಿದರು.
ಮುಂಗಾರು ಪ್ರಾರಂಭವಾಗಿ 5ವಾರ ಕಳೆದರೂ ಮಳೆ ಆಗುತ್ತಿಲ್ಲ. ಇದರಿಂದ ಕಂಗಾಲಾದ ರೈತರು, ಜನತೆ ಮಳೆಗಾಗಿ ಆಕಾಶದತ್ತ ನೋಡುತ್ತಿದ್ದಾರೆ. ಸರ್ವರ ಹಿತಕ್ಕಾಗಿ ಮಳೆಯಾಗಲಿ ಎಂದು ಮುತ್ತ್ಯೆದರಿಂದ ಜಲಾಭಿಷೇಕ ಕಾರ್ಯಕ್ರಮವನ್ನು ದೇವಸ್ಥಾನ ಸಮಿತಿ ಹಾಗೂ ಅಕ್ಕನ ಬಳಗದವರು ವಿಶೇಷ ಪೂಜೆ ಏರಿ್ಡಸಿದ್ದರು. ಮುತೈದೆಯರಿಂದ ಶ್ರೀ ಮಹಾಲಕ್ಷ್ಮಿ ಗೆ ಅಭಿಷೇಕ, ನೈವೇದ್ಯ,ಕುಂಭ ಮೆರವಣಿಗೆ ಜಲಾಭಿಷೇಕ, ರುದ್ರಾಭಿಷೇಕ, ಸಾಮೂಹಿಕ ಭಜನೆ ನೆರವೇರಿತು. ನಂತರ ಮಧ್ಯಾಹ್ನದ ಅನ್ನ ಪ್ರಸಾದ ವಿತರಣೆ, ಅಭಿಷೇಕ ಉಡಿ ತುಂಬುವ ಕಾರ್ಯಕ್ರಮಗಳನ್ನು ವಿಶ್ವನಾಥ ಯಂಬತ್ನಾಳ ಹಾಗೂ ಕಾಶಿನಾಥ ಯಂಬತ್ನಾಳ ಕುಟುಂಬ ಸದಸ್ಯರು ನೆರವೇರಿಸಿದರು.
ಸಾಯಂಕಾಲ ಮಂಗಳಾರತಿಯೊಂದಿಗೆ ಜಾತ್ರೆ ಸಂಪನ್ನವಾಯಿತು. ನೇತೃತ್ವವನ್ನು ಗುರುಬಾಯಿ ದೇವೂರ, ರೇಖಾ ನಾಡಗೌಡ, ಗಂಗಾಬಾಯಿ ಬಬಲೇಶ್ವರ, ಸುಮಂಗಲಾ ಬೀಳಗಿ, ಬೋರಮ್ಮ ಹೊಸಮನಿ, ಕಾಶಿಬಾಯಿ ಮಿಂಚನಾಳ, ಸುಶ್ಮಿತಾ ಏಳುಕೋಟಿ, ಗಂಗಾಬಾಯಿ ಮಿಂಚನಾಳ, ಶ್ರೀಧರ ನಾಡಗೌಡ, ಪ್ರಭಾಕರ ಕುಲಕರ್ಣಿ, ನರೇಂದ್ರ ನಾಡಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.