ವಿಜಯಪುರ

ಬಿಜಾಪುರ ನಗರ ಎನ್‌ಎಸ್‌ಯುಐ ಅಧ್ಯಕ್ಷರಾಗಿ ಮೊಹಮ್ಮದ್ ತೌಹೀದ್ ಮೊಮಿನ್ ನೇಮಕ

ಬಿಜಾಪುರ ನಗರ ಎನ್‌ಎಸ್‌ಯುಐ  ಅಧ್ಯಕ್ಷರಾಗಿ ಮೊಹಮ್ಮದ್ ತೌಹೀದ್ ಮೊಮಿನ್ ನೇಮಕ

ಲೋಕದರ್ಶನ ವರದಿ

ಬಿಜಾಪುರ ೨೪ :  ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಓSUI) ಬಿಜಾಪುರ ನಗರ ಘಟಕದ ಅಧ್ಯಕ್ಷರಾಗಿ ಮೊಹಮ್ಮದ್ ತೌಹೀದ್ ಮೊಮಿನ್ ಅವರನ್ನು ನೇಮಕ ಮಾಡಲಾಗಿದೆ.

ಓSUI ಬಿಜಾಪುರ ಜಿಲ್ಲಾ ಅಧ್ಯಕ್ಷ ಕಿರಣಗೌಡ ಬಿರಾದಾರ ಅವರು ಆ.೨೪ರಂದು ಹೊರಡಿಸಿರುವ ಆದೇಶದನ್ವಯ, ಓSUI ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಎನ್.ಜಿ. ಅವರ ಅನುಮೋದನೆಯೊಂದಿಗೆ ಮೊಹಮ್ಮದ್ ತೌಹೀದ್ ಮೊಮಿನ್ ಅವರನ್ನು ಬಿಜಾಪುರ ನಗರ ಅಧ್ಯಕ್ಷರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.

ಬಿಜಾಪುರ ನಗರದಲ್ಲಿ ವಿದ್ಯಾರ್ಥಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಓSUI ಸಂಘಟನೆಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ವಿಸ್ತರಿಸುವ ಜವಾಬ್ದಾರಿ ನೂತನ ಅಧ್ಯಕ್ಷರ ಮೇಲಿದೆ.

ಮೊಹಮ್ಮದ್ ತೌಹೀದ್ ಮೊಮಿನ್ ಅವರ ನೇಮಕಕ್ಕೆ ಓSUI ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ಮುಖಂಡರು ಅಭಿನಂದನೆ ಸಲ್ಲಿಸಿ, ನೂತನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಶುಭ ಹಾರೈಸಿದ್ದಾರೆ.

ಸುದ್ದಿ ಓದಿ