ಹಗರಿಬೊಮ್ಮನಹಳ್ಳಿ

ರಸಗೊಬ್ಬರಗಳ ಬೆಲೆ ಏರಿಕೆ ನಿಯಂತ್ರಣದಲ್ಲಿ ವಿಫಲವಾದ ಮೋದಿ ಸರಕಾರ

ರಸಗೊಬ್ಬರಗಳ ಬೆಲೆ ಏರಿಕೆ ನಿಯಂತ್ರಣದಲ್ಲಿ ವಿಫಲವಾದ ಮೋದಿ ಸರಕಾರ

ರಸಗೊಬ್ಬರ ಬೆಲೆ ಏರಿಕೆ: ರೈತ ಕಂಗಾಲು,

ಹಗರಿಬೊಮ್ಮನಹಳ್ಳಿ 09 : ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವ ಬೆನ್ನಲ್ಲೇ ರಸಗೊಬ್ಬರಗಳ ಬೆಲೆಯು ಹೆಚ್ಚಿಸಿರುವುದು ರೈತರನ್ನು ಆತಂಕಕ್ಕೀಡು ಮಾಡಿದ್ದಲ್ಲದೆ ರೈತರಿಗೆ ಬರೆ ಎಳೆದಂತಾಗಿದೆ ಎಂದು ರಾಜ್ಯ ರೈತ ಸಂಘದ ಹೋರಾಟಗಾರ್ತಿ ಶಂಶಾದ್ ಬೆಗಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶದ ಬೆನ್ನೆಲುಬಾದ ರೈತರಿಗೆ ಹಿಂಬದಿಯಿಂದ ಚೂರಿ ಹಾಕುವ ಹುನ್ನಾರ ನಡೆಯುತ್ತಿದೆ, ರಸ ಗೊಬ್ಬರಗಳ ಬೆಲೆ ಏರಿಕೆಯಿಂದ ರೈತರ ಜೀವನ ದುಸ್ತರವಾಗಲಿದೆ, ಸದ್ಯದ ಪರಿಸ್ಥಿತಿಯಲ್ಲಿ ರೈತ ಪರ ನಿಲ್ಲಬೆಕಾದ ಸರಕಾರಗಳು ರೈತರ ವಿರುಧ್ಧ ನೀತಿ ನಿಯಮ ರೂಪಿಸುವುದಲ್ಲದೇ ಇಂದು ಅವಶ್ಯಕವಾದ ರಸಗೊಬ್ಬರಗಳ ಬೆಲೆಯನ್ನು ನಿಂತ್ರಿಸುವಲ್ಲಿ ವಿಫಲವಾಗಿರುವುದು ನೋಡಿದರೆ ಸರಕಾರ ಯಾರ ಪರ ನಿಂತಿದೆ ಎಂಬುದು ಸಾಬೀತಾಗುತ್ತದೆ, ಬೆಂಬಲ ಬೆಲೆ ಸಿಗದೆ ರೈತ ಕಂಗಾಲಾಗಿ ಆರ್ಥಿಕವಾಗಿ ಕುಗ್ಗುವ ಪರಿಸ್ಥಿತಿಯಲ್ಲಿ ಇದ್ದರೆ ಇನ್ನೊಂದೆಡೆ ರಸಗೊಬ್ಬರಗಳ ಬೆಲೆ ಏರಿಕೆಯು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿರುವುದು ಮೋದಿ ಸರಕಾರದ ಸಾಧನೆಯಾಗಿದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿ ಓದಿ