ಮೋದಿಜಿ ಒಳ್ಳೆಯ ಆಡಳಿತ ಮೆಚ್ಚಿದ್ದಾರೆ: ಮಂಜುನಾಥ ಬ್ಯಾಹಟ್ಟಿ
ಲೋಕದರ್ಶನ ವರದಿ
ಶಿಗ್ಗಾವಿ 07: ಮೂರು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಜಯಶಾಲಿಯಾಗಲು ಕಾರಣ ನರೇಂದ್ರ ಮೋದಿಜಿ ಅವರ ನೇತೃತ್ವದ ಭಾರತೀಯ ಜನತಾ ಪಕ್ಷದೇಶದ ಪ್ರತಿಯೊಬ್ಬ ಜನರ ಏಳಿಗೆಗಾಗಿ, ದೇಶದ ರಕ್ಷಣೆಗಾಗಿ, ಆರ್ಥಿಕ ಸಮೃದ್ಧಿಗಾಗಿ, ರೈತರ ಆಶಾಕಿರಣವಾಗಿ ಪ್ರಧಾನ ಮಂತ್ರಿಯವರು ಮಾಡಿರುವ ಒಳ್ಳೆಯ ಆಡಳಿತವನ್ನು ಜನ ಮೆಚ್ಚಿದ್ದು ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಧೂಳಿಪಟ ಮಾಡಿದೆ ಎಂದು ಜಿಲ್ಲಾ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಹಾಗೂ ಪುರಸಭೆ ಸದಸ್ಯ ಮಂಜುನಾಥ ಬ್ಯಾಹಟ್ಟಿ ಹೇಳಿದರು.
ಪಟ್ಟಣದ ವರದಿಗಾರರೊಂದಿಗೆ ಮಾತನಾಡಿದ ಅವರು ಭಾರತೀಯ ಜನತಾ ಪಕ್ಷಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಯಭೇರಿ ಆಗಿದೆ ಮತ್ತು ಭಾರತದೇಶದಲ್ಲಿ ಪುರಾತನ ಕಾಲದಿಂದ ನಡೆದು ಬಂದ ಸನಾತನ ಧರ್ಮವನ್ನು ಕಾಂಗ್ರೆಸ್ ಪಕ್ಷ ವಿರೋಧ ಮಾಡಿರುವುದರಿಂದ ಹಾಗೂ ರಾಜಸ್ಥಾನ್ ರಾಜ್ಯದ ಉದಯಪುರದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾದ ಕನೈಯ ಲಾಲ್ಟೈಲರನ್ನ ಕ್ರೂರವಾಗಿ ಹತ್ಯೆ ಮಾಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲೆ ಮಾಡುವುದಾಗಿ ಹೇಳಿಕೆ ನೀಡಿದ ಕ್ರೂರಿಗಳ ವಿರುದ್ಧ ಜನಕ್ಕೆ ಉತ್ತರವನ್ನು ನೀಡುವುದರ ಜೊತೆಗೆ ಮೋದಿಜೀರವರ ಆಡಳಿತ ಮಾದರಿಯಾಗಿದೆ
ಮುಂದಿನ ದಿನಮಾನಗಳಲ್ಲಿ ಅಂದ್ರೆ ಲೋಕಸಭಾಚುನಾವಣೆಯಲ್ಲಿ ಈ ಬಾರಿ ಅತಿ ಹೆಚ್ಚು ಸಂಖ್ಯೆಯಿಂದ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡುವುದು ಶತಸಿದ್ಧ ಕಾಂಗ್ರೆಸ್ಸಿನ ನಾಯಕರು ಮೋದಿಯ ಹವಾ ಇಲ್ಲ ಮೋದಿ ಇನ್ಮುಂದೆ ಪ್ರಧಾನಿಯಾಗಲ್ಲಅಂತ ಹೇಳಿಕೆ ಕೊಡೋರಿಗೆ ಇದೊಂದು ಸರಿಯಾದ ಸಾಕ್ಷಿ. ಜನರಿಗೆ ಯಾವ ಪಕ್ಷದ ಅಭ್ಯರ್ಥಿಗಳ ಆಯ್ಕೆ ಮಾಡಬೇಕು ಅನ್ನೋದು ಗೊತ್ತಾಗಿದ್ದು ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ರಾಜ್ಯದಿಂದ 28ಕ್ಕೆ 28 ಸದಸ್ಯರನ್ನು ಜಯಶಾಲಿ ಮಾಡಿ ಮತ್ತೊಮ್ಮೆ ಮೋದಿಜಿ ಅವರನ್ನು ಪ್ರಧಾನಮಂತಿ ಮಾಡುತ್ತೇವೆ ಎಂದರು