ರಸ್ತೆ ಅಪಘಾತಗಳ ಬಗ್ಗೆ ಅಣಕು ಪ್ರದರ್ಶನ
ಬಳ್ಳಾರಿ 24: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ, ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ಗೃಹರಕ್ಷಕದಳ ಮತ್ತು ಜಿಲ್ಲಾ ಆಸ್ಪತ್ರೆ, ಬಳ್ಳಾರಿ ಇವರ ವತಿಯಿಂದ ದಿನಾಂಕ:24.02.2021 ರಂದು “ರಾಷ್ಟ್ರೀಯ ಸಂಚಾರಿ ಅರಿವು ಮಾಹೆ” ಅಂಗವಾಗಿ “ಸೋಶಿಯಲ್ ಎಮರ್ಜೆನ್ಸಿ ರೆಸ್ಪಾನ್ಸ್ ವಾಲಂಟಿಯರ್ಸ್” ಇವರಿಂದ ರಸ್ತೆ ಅಪಘಾತಗಳ ಬಗ್ಗೆ “ಅಣಕು ಪ್ರದರ್ಶನ” (ಪ್ರಾತ್ಯಾಕ್ಷಿಕತೆ)ವನ್ನು ನಡೆಸಲಾಯಿತು.
ಸಂಜೆ 5.00 ಗಂಟೆಗೆ ಇಂದಿರಾ ವೃತ್ತದಲ್ಲಿ ರಸ್ತೆ ಅಪಘಾತ ಬಗ್ಗೆ ಅಣಕು ಪ್ರದರ್ಶನ (ಪ್ರಾತ್ಯಾಕ್ಷಿಕತೆ)ವನ್ನು ನಡೆಸಲಾಯಿತು. ವಿಶ್ವದಲ್ಲಿ ಪ್ರತಿ ವರ್ಷ 1.50 ಲಕ್ಷ ಜನರು ರಸ್ತೆ ಅಪಘಾತದಿಂದ ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೋಡ್ಡುತ್ತಿದ್ದಾರೆ. ಅಂದರೆ ಪ್ರತಿದಿನ ಸುಮಾರು 410 ಜನ ಅಪಘಾತದಿಂದ ಸಾಯುತ್ತಿದ್ದಾರೆ. ಇಂತಹ ಅಪಘಾತಗಳಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಅಣಕು ಪ್ರದರ್ಶನವನ್ನು ನಡೆಸಲಾಯಿತು. ಈ ಅಣಕು ಪ್ರದರ್ಶನದಲ್ಲಿ ರಸ್ತೆಯಲ್ಲಿ ಅಪಘಾತ ಆದಾಗ ಹೇಗೆ ಜೀವರಕ್ಷಣೆ ಮಾಡಬೇಕೆಂದು “ಸರ್ವ್” ತಂಡದವರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಂಬುಲೆಂಸ್ಗೆ ಶಿಫ್ಟ್ ಮಾಡಿ ಆಸ್ಪತ್ರೆಗೆ ಕಳುಸುವ ಮೂಲಕ ಪ್ರದರ್ಶನವನ್ನು ನೀಡಿದ್ದರು.
ಈ ಕಾರ್ಯಕ್ರಮದಲ್ಲಿ.ಶೇಖರ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬಳ್ಳಾರಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್, ಇವರ ನೇತೃತ್ವದಲ್ಲಿ ಸರ್ವ್ ತಂಡದ.ಹರಿ ಶಂಕರ್, ಉಮಾಮಹೇಶ್ವರಿ,.ಇಜಾಝ್ ಅಹಮದ್,.ಗಣೇಶ್ ಬಾರಿಕರ,.ಪವನ್ ಕುಮಾರ್,.ವಾಸು.ಪಿ.,.ವಿಶ್ನು ಕುಮಾರ್,.ನಿಸಾರ್ ಅಹಮದ್.ಎಂ.ಐ.,.ಕಾಜಾ ಮೈನುದ್ದೀನ್,.ಮಹಬೂಬ್ ಬಾಷಾ,.ದಿವಾಕರ್,.ಮಹಮ್ಮದ್ ರಫಿ,.ರಿಜ್ವಾನ, ಎಂ.ವಲಿ ಬಾಷಾ,.ಕೆ.ನರಸಿಂಹ ರೆಡ್ಡಿ,.ಮಂಜುನಾಥ್ ಮತ್ತು ಅನೇಕ ಸರ್ವ್ ತಂಡದವರು ಭಾಗಿಯಾಗಿದ್ದರು.