ಬಳ್ಳಾರಿ

ಭಾರತ ಬಂದ್‌ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ

ಭಾರತ ಬಂದ್‌ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 27: ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ನೀಡಿದ ಭಾರತ ಬಂದ್‌ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕಂಡುಬಂದಿತು. 

ಈ ಸಂದರ್ಭದಲ್ಲಿ ಸ್ವರಾಜ್ಯ ಇಂಡಿಯಾದ ಮುಖಂಡ ಜೆ.ಎಂ.ವೀರಯ್ಯ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದು ರೈತರ ಮರಣ ಶಾಸನಕ್ಕೆ ಮುದ್ರೆ ಹಾಕಿದೆ, ಅದಾನಿ ಅಂಬಾನಿಗಳಿಗೆ ಕೇಂದ್ರದ ಯೋಜನೆಗಳು ಮುಂಚಿತವಾಗಿಯೆ ತಿಳಿದಿದ್ದು ಸುಮಾರು ಐದು ವರ್ಷಕ್ಕಾಗುವಷ್ಟುನ ಧಾನ್ಯಗಳನ್ನು ಸಂಗ್ರಹಿಸುವ ಗೋಡಾನ್‌ಗಳನ್ನು ಗುಜರಾಜ್‌ನಲ್ಲಿ ಈಗಾಗಲೇ ಸಿದ್ದವಿರಿಸಿರುವುದು ಕಾಣಬಹುದಾಗಿದೆ, ಈ ಕಾಯ್ದೆ ಇಂತಹ ಉಳ್ಳವರಿಗೆ ಲಾಭದಾಯಕವಾಗಿದೆ ಇಂದು 50ರೂಗೆ ಸಿಗುವ ಒಳ್ಳೆಯ ಅಕ್ಕಿ ಈ ಕಾಯ್ದೆ ಜಾರಿಯಿಂದ 500ರೂಗೆ ಮಾರಾಟವಾಗುತ್ತದೆ ಇದರಿಂದ ಸಾಮಾನ್ಯ ಜನ ತತ್ತರಿಸಿ ಹೋಗಿ ಸಾವಿಗೆ ಶರಣಾಗುವುದರಲ್ಲಿ ಅನುಮಾನವಿಲ್ಲ, ಪ್ರೀಪೈಡ್ ಮೀಟರ್ ಅಳವಡಿಕೆಯು ಜನರ ಬದುಕಿಗೆ ಬೆಂಕಿ ಹಚ್ಚುವ ಕೆಲಸವಾಗಿದೆ ಇನ್ನು ರೈತರು ಬೆಳೆದ ಬೆಳೆಗಳು ಮಾರಾಟವಾಗುವ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ, ಕರ್ನಾಟಕ 233 ಎಪಿಎಂಸಿಗಳಲ್ಲಿ ನಡೆಯುವ ಮುಖಾಮುಖಿ ವ್ಯಾಪಾರಕ್ಕೆ ಕುತ್ತು ತರಲು ಸಿದ್ದವಿದೆ ಈ ಸರಕಾರಗಳು, ಕಡಿಮೆ ಹೊಲವಿರುವ ರೈತರನ್ನು ಬೀದಿಗೆ ತರುವ ಕಾರ್ಯದಲ್ಲಿ ನಿರತವಾಗಿದೆ,ಬೆಂಬಲ ಬೆಲೆ ಪಡೆಯಬೇಕಾದರೆ ಕನಿಷ್ಟ ಕಾನೂನು ಮಾಡಲು ಸಿದ್ದವಿಲ್ಲ, ಇಂತಹ ಕಾಯ್ದೆಗಳನ್ನು ನಿರಾಕರಿಸಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಇವತ್ತಿಗೂ ಸ್ಫಂದಿಸದಿರುವುದು ಕಾಣಬಹುದಾಗಿದೆ ಮುಂದಿನ ಪಾರ್ಲಿಮೆಂಟ್ ಚಿನಾವಣೆವರೆಗೂ ನಾವು ಧರಣಿ ನಡೆಸಿ ನಂತರ ತಕ್ಕ ಉತ್ತರ ನೀಡುತ್ತೆವೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು. 


ಕೆಲ ಮಾಧ್ಯಮಗಳು ಆಧಿಕಾರವಿರುವವರ ಪರವಾಗಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ, ಮುಂದಿನ ದಿನಗಳಲ್ಲಿ ನಾವೇ ಸ್ವತಃ ಸಾಮಾಜಿಕ ಜಲತಾಣಗಳನ್ನು ರೂಪಿಸಿ ಜನರಿಗೆ ಸಮಾಜದಲ್ಲಿನ ಸಂಗತಿಗಳನ್ನು ಬಿತ್ತರಿಸಿದರೆ ಮಾತ್ರ ದೇಶದ ಉಳಿಗಾಲವೆಂದು ಕೆಲ ಮಾಧ್ಯಮಗಳ ವಿರುಧ್ಧವು ಬೇಸರ ವ್ಯಕ್ತಪಡಿಸಿದರು. 


ಗೋಣಿಬಸಪ್ಪ ಮಾತನಾಡಿ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಲೆ ಕೇಳುವುದು ತಪ್ಪೆ, ರೈತ ವಿರೋಧಿಗಳ ಕಾನೂನಗಳನ್ನು ಅಲ್ಲಗೆಳೆಯುವುದು ತಪ್ಪೆ, ಕೃಷಿ ವಿರೋಧಿ ಕಾನೂನಗಳನ್ನು ಹಿಂಪಡೆಯುವ ತನಕ ನಾವು ಬಿಡುವುದಿಲ್ಲ, ದೆಹಲಿಯಲ್ಲಿ ಧರಣಿ ನಿರತ ರೈತರನ್ನು ಅಲ್ಲಗೆಳೆಯುವುದು ದೇಶದ ಬೆನ್ನೆಲುಬು ಎಂದು ಕರೆಯುವ ರೈತನಿಗೆ ನೀಡುವ ಗೌರವ ಇದಾಗಿದೆ,ದೆಹಲಿಯ ಚಳುವಳಿಯಲ್ಲಿ 600ಕ್ಕೂ ಹೆಚ್ಚು ರೈತರು ಪ್ರಾಣತ್ಯಾಗ ಮಾಡಿದ್ದಾರೆ ದೇಶದ ಪ್ರಧಾನಿ ರೈತರ ವಿರೋಧಿ ಕಾನೂನಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ,ಸೌಜನ್ನಕ್ಕಾದರು ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ದಿನೇ ದಿನೇ ಬೆಲೆ ಏರಿಕೆಯ ಬರೆಯನ್ನು ಸಾಮಾನ್ಯರ ಮೇಲೆ ಎಳೆಯುತ್ತಿರುವ ಎರ್ಕಾಋಗಳಿಗೆ ಮುಮದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದರು. 



ಸಿಐಟಿಯು ರಾಜ್ಯ ಮುಖಂಡ ಆರ್‌.ಎಸ್‌.ಬಸವರಾಜ ಮಾತನಾಡಿ ರಸಗೊಬ್ಬರಗಳ ಬೆಲೆಯನ್ನು ಗಗನಕ್ಕೇರಿಸಿ ರಾಜ್ಯ,ಕೇಂದ್ರ ಸರರ್ಕಾರಗಳು ರೈರನ್ನು ಸಂಕಷ್ಟಕ್ಕೆ ಸಿಲುಕಿಸಿವೆ, ಕರೋನಾ ಅಟ್ಟಹಾಸದಲ್ಲಿ  ಜನರ ಬಗ್ಗೆ ಯೋಚಿಸದ ಕೇಂದ್ರ ಸರ್ಕಾರ ರೈತರ ವಿರುದ್ದದ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರುವಲ್ಲಿ ಮಗ್ನವಾಗಿತ್ತು, ಸಂಘಪರಿವಾರವು ಕೇಂದ್ರ ಸರ್ಕಾರವನ್ನು ಹಿಡಿತದಲ್ಲಿಟ್ಟುಕೊಂಡಿದೆ ,ಹಿಂದುತ್ವದ ಹೆಸರಿನಲ್ಲಿ ದೇಶವನ್ನು ಆಳುವ ಹುನ್ನಾರ ನಡೆಸಲು ಮುಂದಾಗಿದೆ, ಅಪ್ಘಾನಿಸ್ತಾನದಲ್ಲಿ ನಡೆದ ಘಟನೆಯನ್ನು ಭಾರತದಲ್ಲಿ ನಡೆಸುವಲ್ಲಿ ಕೆಲವರು ಭಾಗಿಯಾಗಿದ್ದಾರೆ, ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಸಂವಿಧಾನದಲ್ಲಿ ನಂಬಿಕೆ ಇಲ್ಲ, ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ಕೋಮವಾದಿ ಸಂಘಟನೆಗಳು ನಡೆಸುತ್ತಿವೆ,ದಲಿತರನ್ನು ಕಡೆಗಾಣಿಸುತ್ತಿದ್ದಾರೆ ದೇಶದಲ್ಲಿ ಎಲ್ಲಾ ಕಡೆ ಬಿಜೆಪಿ ಪಕ್ಷ ಅಧಿಕಾರವಿದ್ದರೂ ಯಾವುದೇ ಅತ್ಯಾಚಾರಿ ಅಪರಾಧಿಗೆ ಶಿಕ್ಷೆ ವಿಧಿಸಿಲ್ಲ ಎಂಬುದು ತಾಜಾ ಉದಾಹರಣೆಯಾಗಿದೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನ ಸಾಮಾನ್ಯರ ಮೇಲೆ ಬರೆ ಹಾಕಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುಧ್ಧ ಹಾರಿಹಾಯ್ದರು. 


ಪಟ್ಟಣದ ಈಶ್ವರ ದೇವಸ್ಥಾನದಿಂದ ಕೆಪಿಆರ್‌ಎಸ್, ಸಿಐಟಿಯು, ಕೆಆರ್‌ಎಸ್, ಎಐಕೆಎಸ್, ಜೆಎಮ್‌ಎಸ್, ಕೆಆರ್‌ಎಸ್,ಎಸ್‌ಎಫ್‌ಐ, ಎಎಪಿ ಸೇರಿದಂತೆ ಇನ್ನು ಹಲವಾರು ಸಂಘಟನೆಗಳು ಜಾಥದ ಮೂಲಕ ಬಂದ್‌ಗೆ ಬೆಂಬಲ ಸೂಚಿಸಿದವು. 


ಈ ಸಂಧರ್ಭದಲ್ಲಿ ಕೆಪಿಆರ್‌ಎಸ್‌ನ ಕೊಟಗಿ ಮಲ್ಲಿಕಾರ್ಜುನ, ಸಿಐಟಿಯುನ ಆರ್‌.ಎಸ್‌.ಬಸವರಾಜ, ರೈತಸಂಘದ ಮುಖಂಡ ಸಿದ್ದನಗೌಡ, ಸಿಐಟಿಯುನ ಎಸ.ಜಗನ್ನಾಥ್, ಎಐಕೆಎಸ್ ಅನ್ವರಬಾಷಾ, ಜೆಎಂಎಸ್ ಸರೋಜಮ್ಮ, ಕೆಆರ್‌ಎಸ್ ಪಕ್ಷದ ಗಣೇಶ್ ಸೇರಿದಂತೆ ಕರ್ನಾಟಕ ಅಹಿಂದ ಜನಪರ ವೇದಿಕೆಯ ಪಾಯಲ್ ಬಾನು, ಅಂಗನವಾಡಿ ನೌಕರರ ನೌಕರರ ತಾಲೂಕು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪಟ್ಟಣದ ಪೋಲೀಸ್ ಇಲಾಖೆ ಬಂದೂಬಸ್ತ್‌ ಏರಿ​‍್ಡಸಿತ್ತು.ಬಂದ್ ಶಾಂತಿಯುತವಾಗಿ ನಡೆಯಿತು. 


ಸುದ್ದಿ ಓದಿ