ಯುವತಿ ಕಾಣೆ ಪ್ರಕರಣ ದಾಖಲು ,,...
ಬಳ್ಳಾರಿ 20: ಸಂಡೂರು ತಾಲೂಕಿನ ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯ ರಣಜೀತಪುರ ಗ್ರಾಮದ ನಿವಾಸಿಯಾದ 22 ವರ್ಷದ ಪೂಜಾ ಎನ್ನುವ ಯುವತಿ ಡಿ.13ರಂದು ಕಾಣೆಯಾದ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತೋರಣಗಲ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಮಾರು 05 ತಿಂಗಳಿಂದ ತೋರಣಗಲ್ಲು ಆರ್.ಎಸ್.ನಲ್ಲಿರುವ ನೈವೈದ್ಯಮ್(ಪ್ರಿಯಾದರ್ಶಿನಿ)ಹೋಟೆಲ್‌ನಲ್ಲಿ ಸ್ಟೋರ್ ಕೀಪರ್ ಕೆಲಸ ಮಾಡಿಕೊಂಡಿದ್ದು, ಅಲ್ಲೇ ವಾಸ್ತವ್ಯ ಇದ್ದಳು. ವಾರಕ್ಕೊಮ್ಮೆ ಇಲ್ಲವೇ 15ದಿನಗಳಿಗೊಮ್ಮೆ ಊರಿಗೆ ಬಂದು ಹೊಗುತ್ತಿದ್ದಳು. ಡಿ.13ರಂದು ಬೆಳಗ್ಗೆ 6.10ಕ್ಕೆ ತನ್ನ ಮೊಬೈಲ್ ಪೋನ್‌ನಿಂದ ನನ್ನ ನಂಬರ್‌ಗೆ ಕರೆ ಮಾಡಿ ನಾನು ಊರಿಗೆ ಬರುತ್ತಿದ್ದು, ಈಗ ನಾನು ತೋರಣಗಲ್ಲು ಬಸ್ಟಾಂಡ್‌ನಲ್ಲಿದ್ದೇನೆ ಎಂದು ಹೇಳಿದಳು. ನಂತರ ಆಕೆಯು ಮರುದಿನ ಬೆಳಗ್ಗೆ 8ಗಂಟೆಯಾದರೂ ಮನೆಗೆ ಬರಲಿಲ್ಲ. ಆಗ ಆಕೆ ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿ ವಿಚಾರಿಸಿದಾಗ ಬೆಳಗ್ಗೆ 6ಗಂಟೆಗೆ ಹೋಟೆಲ್‌ನಲ್ಲಿ ಕೆಲಸ ಮಾಡುವ ಪ್ರಭು ಎನ್ನುವವರು ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿರುವುದಾಗಿ ತಿಳಿಸಿದ್ದಾನೆ ಎಂದು ದೂರು ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾಣೆಯಾದ ಯುವತಿಯ ಗುರುತಿನ ಚಹರೆ: 5ಅಡಿ ಎತ್ತರ, ದುಂಡು ಮುಖ, ಸಾದಾರಣ ಮೈಕಟ್ಟು, ಗೋಧಿ ಮೈಬಣ್ಣ ಇದ್ದು, ಮುಂದಿನ ಭಾಗದ ಮೇಲಿನ 1 ಹಲ್ಲು ಮುರಿದಿದ್ದು ಬೇರೆ ಹಲ್ಲು ಹಾಕಿಸಿಕೊಂಡಿರುತ್ತಾಳೆ. ನೀಲಿ ಬಣ್ಣದ ಜಿರ್ಕಿನ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ, ಇಂಗ್ಲೀಸ್, ಹಿಂದಿ ಹಾಗೂ ಲಂಬಾಣಿ ಬಾಷೆಯನ್ನು ಮಾತನಾಡುತ್ತಾಳೆ.
ಕಾಣೆಯಾದ ಯುವತಿಯ ಮಾಹಿತಿ ತಿಳಿದಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.ಸಂ.08392-258100, ತೋರಣಗಲ್ಲು ಪೊಲೀಸ್ ಠಾಣೆಯ ದೂ.ಸಂ.08392-250100, ಡಿ.ಎಸ್.ಪಿ ಅವರ ಮೊ.ಸಂ.9480803022, ಸಿ.ಪಿ.ಐ ಅವರ ಮೊ.ಸಂ.9480803036 ಹಾಗೂ ತೋರಣಗಲ್ಲು ಪೊಲೀಸ್ ಠಾಣೆಯ ಪಿ.ಎಸ್.ಐ ಅವರ ಮೊ.ಸಂ.9480803062ಗೆ ಸಂಪರ್ಕಿಸಲು ಕೋರಿದ್ದಾರೆ.