ಬಳ್ಳಾರಿ04: ನಗರದ ಮಹಾನಂದಿಕೊಟ್ಟಂ ನಿವಾಸಿ 55 ವರ್ಷದ ಮಲ್ಲಿಕಾಜರ್ುನ ಎನ್ನುವ ವ್ಯಕ್ತಿ ಮೇ 3ರಂದು ಕಾಣೆಯಾಗಿರುವ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಹಾಯಕ ಸಬ್ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾಣೆಯಾದ ವ್ಯಕ್ತಿಯ ಚಹರೆ ಗುರುತು: ಕಪ್ಪು ಮೈಬಣ್ಣ, 5.8 ಅಡಿ ಎತ್ತರ, ಸಾಧಾರಣಾ ಮೈಕಟ್ಟು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಗೆರೆಯುಳ್ಳ ಬಿಳಿ ಅಂಗಿ, ನೀಲಿ ಪ್ಯಾಂಟ್ ಧರಿಸಿರುತ್ತಾರೆ. ಹೊಟ್ಟೆಯ ಬಲ ಭಾಗದಲ್ಲಿ ಹಳೆ ಗಾಯದ ಗುರುತುಗಳು ಇರುತ್ತವೆ.ಕಾಣೆಯಾದ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಬಳ್ಳಾರಿ ಕಂಟ್ರೋಲ್ ರೂಂ.ಸಂ:08392-258100, ಗಾಂಧಿನಗರ ಪೊಲೀಸ್ ಠಾಣೆಯ ದೂ.ಸಂ:08392-272192, ಗಾಂಧಿನಗರ ಪಿಎಸ್ಐ ಮೊ.ಸಂ:9480803082 ಹಾಗೂ ಗಾಂಧಿನಗರ ಪಿಐ ಮೊ.ಸಂ: 9480803046 ಗೆ ಸಂಪಕರ್ಿಸಲು ತಿಳಿಸಲಾಗಿದೆ.