ಯುವತಿ ಕಾಣೆ
ಮುಂಡಗೋಡ 13: ಪಟ್ಟಣದ ಇಂದಿರಾನಗರ ನಿವಾಸಿ ಯುವತಿಯೊಬ್ಬಳು ಕಾಣೆಯಾಗಿರುವ ಬಗ್ಗೆ ಮಂಗಳವಾರ ಮುಂಡಗೋಡ ಪೊಲೀಸ್ï ಠಾಣೆಯಲ್ಲಿ ದೂರು ದಾಖಲಾಗಿದೆ.
ಸಲಿಮಾ ಅಬ್ದುಲ್ವಹಾಬ್ ಹಾನಗಲ್(24) ಕಣೆಯಾದ ಯುವತಿಯಾಗಿದ್ದು, ಈಕೆ ಜನವರಿ 3 ರಂದು ಮನೆಯಿಂದ ಹೋದವಳು ಈವರೆಗೂ ವಾಪಸ್ ಬಂದಿಲ್ಲ. ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಹಾಗಾಗಿ ಹುಡುಕಿ ಕೊಡುವಂತೆ ಈಕೆಯ ತಂದೆ ಅಬ್ದುಲ್ವಹಾಬ್ ಹಾನಗಲ್ ಮಂಗಳವಾರ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.