ವ್ಯಕ್ತಿ ಕಾಣೆ
ಬಳ್ಳಾರಿ 25: ಕುರುಗೋಡು ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ 65 ವರ್ಷದ ಹೊನ್ನೂರ್‍ಸಾಬ್ ಎಂಬ ವ್ಯಕ್ತಿ ಜ.27ರಂದು ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕುರುಗೋಡು ಪೋಲೀಸ್ ಠಾಣೆಯ ಪೋಲೀಸ್ ಸಬ್ ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಗುರುತು:ಅಂದಾಜು 5.6 ಅಡಿ ಎತ್ತರ, ಕೋಲು ಮುಖ,ಗೋಧಿ ಮೈಬಣ್ಣ, ತೆಳ್ಳನೆಯ ಮೈಕಟ್ಟು, ತುಂಬು ತೋಳಿನ ಅಂಗಿ ಮತ್ತು ಕಲರ್ ಲುಂಗಿ ಧರಿಸಿರುತ್ತಾನೆ. ಇವರಿಗೆ ಕನ್ನಡ, ತೆಲುಗು, ಹಿಂದಿ ಮಾತನಾಡಲು ಬರುತ್ತದೆ.
ಕಾಣೆಯಾದವರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣೆಯ ದೂ.ಸಂ.08392-263433, 9480803051,9480803039 ಸಂಪರ್ಕಿಸಲು ಕೋರಿದೆ.