ಬಳ್ಳಾರಿ

ವ್ಯಕ್ತಿ ಕಾಣೆ

ವ್ಯಕ್ತಿ ಕಾಣೆ

ಬಳ್ಳಾರಿ 02: ತೋರಣಗಲ್ಲುವಿನ ಶಂಕರಗುಡ್ಡದ 22 ವರ್ಷದ ಮಸ್ತಾನ್ ವಲಿ ಎಂಬುವನು ಕಳೆದ ಮೇ27ರಂದು ಕಾಣೆಯಾಗಿರುವ ಪ್ರಕರಣ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಕಾಣೆಯಾದ ವ್ಯಕ್ತಿಯ ಚಹರೆ ಗರುತು: ಎತ್ತರ 5.3 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ಕಪ್ಪು ಬಣ್ಣದ ಟೀ-ಶರ್ಟ್‌, ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ಹಿಂದಿ, ಇಂಗ್ಲೀಷ್ ಮಾತನಾಡುತ್ತಾನೆ. 

ಕಾಣೆಯಾದ ವ್ಯಕ್ತಿಯ ಕುರಿತು ಯಾವುದೇ ರೀತಿಯ ಮಾಹಿತಿ ದೊರೆತಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯ ದೂ:08395-250100, ಮೋ.ಸಂ:9480803062, ಸಿಪಿಐ ಸಂಡೂರು ದೂ: 08395-260100, ಮೋ.ಸಂ: 9480803036, ಡಿವೈಎಸ್ಪಿ ಕೂಡ್ಲಿಗಿ ದೂ: 08391-220326, ಮೋ.ಸಂ:9480803022, ಎಸ್ಪಿ ಬಳ್ಳಾರಿ ದೂ:08392-258300 ಮತ್ತು ಬಳ್ಳಾರಿ ಕಂಟ್ರೋಲ್ ರೂಂ ದೂ:08392-279100ಗೆ ಸಂಪರ್ಕಿಸಲು ಕೋರಿದೆ. 


ಸುದ್ದಿ ಓದಿ