ಮಹಿಳೆ ಕಾಣೆ
ಬಳ್ಳಾರಿ 08: ಕೂಡ್ಲಿಗಿ ಪೊಲೀಸ್ ಠಾಣೆಯ ವ್ಯಾಪ್ತಿಯ ಅಮರದೇವರ ಗುಡ್ಡ ತಾಂಡದ 26 ವರ್ಷದ ಉಷಾ ಎಂಬ ಮಹಿಳೆ ಸೆ.02 ರಿಂದ ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ತನಿಖಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ: 5 ಅಡಿ ಎತ್ತರ, ದಪ್ಪನೆಯ ಮೈಕಟ್ಟು, ಎಣ್ಣೆಗುಂಪು ಮೈಬಣ್ಣ, ಕೆಂಪು ಕಲರ್ ನೈಟಿ ಧರಿಸಿರುತ್ತಾರೆ. ಕನ್ನಡ, ಲಂಬಾಣಿ, ಹಿಂದಿ ಭಾಷೆ ಮಾತನಾಡುತ್ತಾರೆ.
ಕಾಣೆಯಾದ ಮಹಿಳೆಯ ಕುರಿತು ಸುಳಿವು ಸಿಕ್ಕಲ್ಲಿ ಪಿಎಸ್‍ಐ, ಸಿಪಿಐ, ಡಿಎಸ್‍ಪಿ ದೂ.ಸಂ. 08392-22023, 220033.220326, 08392-258100 ಗೆ ಸಂಪರ್ಕಿಸಲು ಕೋರಿದೆ.