ಬಳ್ಳಾರಿ

ವ್ಯಕ್ತಿ ಕಾಣೆ: ಪ್ರಕರಣ ದಾಖಲು

ವ್ಯಕ್ತಿ ಕಾಣೆ: ಪ್ರಕರಣ ದಾಖಲು

ಬಳ್ಳಾರಿ 08: ನಗರದ ಎಸ್‍ಎನ್ ಪೇಟೆಯ 6ನೇ ಕ್ರಾಸ್ ನಿವಾಸಿ ಎಂ.ಶಿವಕುಮಾರ್ (31) ಎನ್ನುವ ವ್ಯಕ್ತಿ ಆ.21ರಿಂದ ಕಾಣೆಯಾಗಿರುವ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ: ಗೋಧಿ ಮೈಬಣ್ಣ, 5.5 ಅಡಿ ಎತ್ತರ, ತೆಳುವಾದ ಮೈಕಟ್ಟು, ತೆಲುಗು, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ. ಬ್ಲೂಕಲರ್ ಡಿಸೈನ್, ಶರ್ಟ್, ಬ್ಲೂ ಕಲರ್ ಪ್ಯಾಂಟ್ ಧರಿಸಿರುತ್ತಾರೆ.

ಕಾಣೆಯಾದ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ನಂ:08392-258100, ಗಾಂಧಿನಗರ ಪೊಲೀಸ್ ಠಾಣೆಯ ದೂ.ಸಂ:08392-272192, ಗಾಂಧಿನಗರ ಪಿ.ಐ ಮೊ.ಸಂ:9480803046 ಹಾಗೂ ಗಾಂಧಿನಗರ ಪಿಎಸ್‍ಐ ಮೊ.ಸಂ:9480803082 ಗೆ ಸಂಪರ್ಕಿಸುವಂತೆ ಅವರು ಕೋರಿದ್ದಾರೆ.

ಸುದ್ದಿ ಓದಿ