ಯುವಕ ಕಾಣೆ
ಬಳ್ಳಾರಿ 03: ಕೂಡ್ಲಿಗಿ ಪಟ್ಟಣ ನಿವಾಸಿ 19 ವರ್ಷದ ಗೋಪಿಕುಮಾರ ಎಂಬ ಯುವಕ ಜು.17ರಿಂದ ಕಾಣೆಯಾಗಿರುವ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಯುವಕನ ಚಹರೆ: 4ಅಡಿ ಎತ್ತರ, ದಪ್ಪನೆಯ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕನ್ನಡ ಭಾಷೆ ಮಾತನಾಡುತ್ತಾರೆ. ಖಾಕಿ ಕಲರ್ ಅಂಗಿ, ಜೀನ್ಸ್ ಪ್ಯಾಂಟ್ ತೊಟ್ಟಿರುತ್ತಾನೆ.
ಕಾಣೆಯಾದ ಯುವಕನ ಕುರಿತು ಯಾವುದಾದರೂ ಮಾಹಿತಿ ದೊರೆತಲ್ಲಿ ಕೂಡ್ಲಿಗಿ ಪಿಎಸ್ಐ ದೂ:08491-220223, ಕೂಡ್ಲಿಗಿ ಸಿಪಿಐ ದೂ:08491-220033, ಕೂಡ್ಲಿಗಿ ಡಿಎಸ್ಪಿ ದೂ:08491-220326 ಮತ್ತು ಬಳ್ಳಾರಿ ಎಸ್ಪಿ ಕಚೇರಿ ದೂ:08392-258100 ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.