ಬಳ್ಳಾರಿ

ಬಾಲಕರು ಕಾಣೆ: ಪ್ರಕರಣ ದಾಖಲು

ಬಾಲಕರು ಕಾಣೆ: ಪ್ರಕರಣ ದಾಖಲು

ಬಳ್ಳಾರಿ 06: ಕೌಲ್‍ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 13 ವರ್ಷದ ವಾಸುದೇವ ಮತ್ತು 10 ವರ್ಷದ ರಾಜು ಎಂಬ ಬಾಲಕರು ಏ. 3ರಂದು ಕಾಣೆಯಾಗಿರುವ ಬಗ್ಗೆ  ಪ್ರಕರಣ ದಾಖಲಾಗಿದೆ ಎಂದು ಕೌಲ್‍ಬಜಾರ್ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಸಬ್‍ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲಕರ ಚಹರೆ ಗುರುತು: ವಾಸುದೇವ: 142 ಸೆ.ಮೀ ಎತ್ತರ, ಸಾದಾರಣ ಮೈಕಟ್ಟು, ಗೋದಿ ಮೈ ಬಣ್ಣ, ಕೆಂಪು ಬಣ್ಣದ ಟೀಶರ್ಟ ಮತ್ತು ಬಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. 

ರಾಜು: 120 ಸೆ.ಮೀ ಎತ್ತರ, ಗೋದಿ ಮೈ ಬಣ್ಣ ನೀಲಿ ಟೀಶರ್ಟ ಕ್ರೀಮ್ ಕಲರ್ ಪ್ಯಾಂಟ್ ಧರಿಸುತ್ತಾನೆ. ಬಾಲಕರ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಿದೆ.

ಸುದ್ದಿ ಓದಿ