ಯುವಕ ಕಾಣೆ : ಪ್ರಕರಣ ದಾಖಲು
ಬಳ್ಳಾರಿ 04: ಅಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಹೊಳಗುಂದ ಪೋಲೀಸ್ ಠಾಣೆಯ ವ್ಯಾಪ್ತಿಯ ಬಿ.ಸಿ.ಕಾಲೋನಿಯಲ್ಲಿ ವಾಸವಾಗಿದ್ದ 17 ವರ್ಷ ವಯಸ್ಸಿನ ಬಿ.ನಾಗೇಶ ಎಂಬ ಯುವಕ 2021ರ ಜ.21ರಿಂದ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಹೊಳಗುಂದ ಪೋಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಯುವಕನ ಚಹರೆ ಗುರುತುಗಳು: 5.6ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ದುಂಡು ಮುಖವನ್ನು ಹೊಂದಿರುತ್ತಾನೆ. ಹಸಿರು ಬಣ್ಣದ ಡಬ್ಬೆಯುಳ್ಳ ಅಂಗಿ, ಕಪ್ಪು ಬಣ್ಣದ ಪ್ಯಾಂಟನ್ನು ಧರಿಸಿರುತ್ತಾನೆ. ಕನ್ನಡ ಹಾಗೂ ತೆಲುಗು ಬಾಷೆಯನ್ನು ಮಾತನಾಡುತ್ತಾನೆ.
ಈ ಯುವಕನ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಕೂಡಲೇ ಹೊಳಗುಂದ ಪೋಲೀಸ್ ಠಾಣೆಗೆ ಅಥವಾ ಪೋಲೀಸ್ ಠಾಣೆ ಹೊಳಗುಂದ : 9177416319, 9177793019, 9008971164ಗೆ ಮಾಹಿತಿಯನ್ನು ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.