ಬಳ್ಳಾರಿ

ಸಚಿವ ಶ್ರೀರಾಮುಲು ರಾಜೀನಾಮೆ ನೀಡಬೇಕು: ಉಗ್ರ​‍ಪ್ಪ ಪಟ್ಟು

ಸಚಿವ ಶ್ರೀರಾಮುಲು ರಾಜೀನಾಮೆ ನೀಡಬೇಕು: ಉಗ್ರ​‍ಪ್ಪ ಪಟ್ಟು

ಬಳ್ಳಾರಿ 17: ಆಕ್ರಮ ಭೂ ಹಗರಣದಲ್ಲಿ ಭಾಗಿಯಾಗಿರುವ ಶ್ರೀರಾಮುಲು ನಿಮಗೆ ಕಾನೂನಿನ ಮೇಲೆ ಗೌರವ ಇದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಥವಾ ಬೊಮ್ಮಾಯಿ ಅವರು ಸಚಿವ ಸ್ಥಾನದಿಂದ ಶ್ರೀರಾಮುಲು ಅವರನ್ನು ವಜಾಗೊಳಿಸಬೇಕು ಎಂದು ಮಾಜಿ ಸಂಸದ ಉಗ್ರ​‍್ಪ ಹೇಳಿದರು. ಬಳ್ಳಾರಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಇಂದು ಆಯೋಜಿಸಲಾಗಿದೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಶ್ರೀರಾಮುಲು ಒಂದು ಗಂಟೆ ಸುದ್ದಿಗೋಷ್ಟಿ ನಡೆಸಿದ್ದಾರೆ. ಅವರು ಬಳಸಿದ ಪದಗಳನ್ನು ಗಮನಿಸಿರುವೆ, ವಿದ್ಯೆಯಿಂದ ವಿಷಯದಿಂದ ಗೌರವ ಎಂಬ ಸಂಸ್ಕೃತ ಶ್ಲೋಕ ಇದೆ, ಶ್ರೀರಾಮುಲು ಮಾತುಗಳಿಗೆ ಈ ಶ್ಲೋಕ ಅನ್ವಯಿಸಬಹುದು, ಶ್ರೀರಾಮುಲು ಅವರು ವಾಲ್ಮೀಕಿ ಜಯಂತಿ ದಿನ ಇದೇ ಮಾತನಾಡಿದ್ದಾರೆ. ಬೊಮ್ಮಾಯಿ ಅವರದು ಮೂರ್ತಿ ಚಿಕ್ಕದು ಮೆದುಳು ದೊಡ್ಡದು, ನನ್ನದು ದೇಹ ದೊಡ್ಡದು ಆದರೆ ಬುದ್ಧಿ ಇಲ್ಲ ಎಂದು ಶ್ರೀರಾಮುಲು ಅನೇಕ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯ ಅವ ರಿಗೆ ತೊಡೆ ತಟ್ಟಿದ್ದಾರೆ. ಪಕ್ಷ ದ್ರೋಹದ ಬಗ್ಗೆ ಮಾತಾಡಿದ್ದಾರೆ. ಸೋಲು ಗೆಲುವಿನ ಬಗ್ಗೆ ಮಾತನಾಡಿದ್ದಾರೆ, ಶ್ರೀರಾಮುಲು ಬಳ್ಳಾರಿ, ಬದಾಮಿಯಲ್ಲಿ ಸೋತಿಲ್ಲವೇ? ಶಾಂತಾ, ಸುರೇಶಬಾಬು, ಸಣ್ಣಫಕೀರ​‍್ಪ ಸೋತಿಲ್ಲವೇ? ಕಲ್ಯಾಣ ಕಾಳಜಿ ಕರ್ನಾಟಕದ ಬಗ್ಗೆ ಬಹಳ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಮೊಳಕಾಲೂರಿನಲ್ಲಿ ಮಾಡಿದಿರಿ? ಜನ ಉತ್ತರ ಬಯಸುತ್ತಾರೆ ಉಗಪ್ಪನವರು ಹೇಳಿದರು.  

ಮೇಲೆ ಕೆಳಗೆ ಅವರದೇ ಪಕ್ಷ ಇದೆ ಚುನಾವಣೆ ಫಲಿತಾಂಶದಿಂದ ಒಬ್ಬ ವ್ಯಕ್ತಿಯ ಮೊಳಕಾಲೂರು ಕ್ಷೇತ್ರಕ್ಕೆ ರಾಜೀನಾಮೆ ಸ್ಪರ್ಧೆ ಮಾಡಲಿ, ಸಾರ್ವಜನಿಕ ಬದುಕಿನಲ್ಲಿ ವ್ಯಕ್ತಿತ್ವ ಅಳೆಯಲಾಗದು,ಕಂದಾಯ ನೀರೀಕ್ಷಕ ಜಾಗ ಪರೀಶೀಲನೆ ಮಾಡಿರುವುದಾಗಿ ವರದಿ ನೀಡುತ್ತಾರೆ, ಅದೇ ದಿನ ತಹಶೀಲ್ದಾರ ಅವರು ಭೂ ಪರಿವರ್ತನೆಗೆ ಆದೇಶ ನೀಡುತ್ತಾರೆ. ಮರುದಿನ ಎ ಟಿಪ್ಪಣಿಯೊಂದನ್ನು ನೀಡಿ ಈ ಭಾಗದಲ್ಲಿ ಯಾವುದೇ ಜಾಗ ಕಾಲುವೆಗೆ ಸ್ವಾಧೀನ ಆಗಿಲ್ಲ. ಎಂದು ಪೂರಕ ಪತ್ರ ನೀಡುತ್ತಾರೆ ಮರುದಿನ ಶುಲ್ಕ ನಿಗದಿ ಮಾಡಿ ಭೂಪರಿವರ್ತನೆಗೆ ಅನುಮತಿ ನೀಡಬಹುದೆಂದು ಉಲ್ಲೇಖ ಪತ್ರ ನೀಡುತ್ತಾರೆ. 2011 ಫೆ.2 ರಂದು ಜಿಲ್ಲಾಧಿಕಾರಿ ಭೂ ಪರಿವರ್ತನೆಗೆ ಅನುಮತಿ ನೀಡುತ್ತಾರೆ ಎಂದು ಉಗ್ರ​‍್ಪ ವಿವರಿಸಿದರು. ನಾರಾಯಣರಾವ್ ಅವರಿಂದ ಜಾಗ ಖರೀದಿಸಿದವರು ಅಲ್ಲಿ ಮನೆ ಕಟ್ಟಿಕೊಂಡಿದ್ದರು. ಶ್ರೀರಾಮುಲು ಅವರು ಈ ಮನೆಗಳನ್ನು ಕೆಡವುತ್ತಾರೆ. ಕೃಷ್ಣಮೂರ್ತಿ ದೂರು ನೀಡಿದರೂ ಪೊಲೀಸರು ದಾಖಲು ಮಾಡಲ್ಲ, ಖಾಸಗಿಯಾಗಿ ನ್ಯಾಯಾಲಯದ ಮೂಲಕ ದೂರು ಛ. 120.406,420,447, .471 ಚಿಣ 73 ಮತ್ತು 192(ಎ), 1964 ಕಂದಾಯ ಇಲಾಖೆ ಕಾಯ್ದೆ ಅನ್ವಯ ಪ್ರಕರಣ ದಾಖಲಾಗುತ್ತದೆ. ಸದರಿ ಪ್ರಕರಣ ಬಳ್ಳಾರಿಯ ನ್ಯಾಯಾಲಯದಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 2022ರ ಮಾರ್ಚ್‌ 30 ರಂದು ವರ್ಗಾವಣೆ ಆಗಿ ಅಲ್ಲಿ ಪ್ರಕರಣ 376/2022 ದಾಖಲಾಗಿದೆ. ಸದರಿ ಪ್ರಕರಣದಲ್ಲಿ ಎಎ2 ಹಾಗೂ ಎಂಚಾಮೀನು ಪಡೆದಿದ್ದಾರೆ ಎಂದು ಅವರು ವಿವರಿಸಿದರು. ಕಾಂಗ್ರೆಸ್ಸಿನ ನಾಯಕರ ಹೆಸರು ಹೇಳಿ ಜಾಮೀನಿನ ಮೇಲಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ. ಆದರೆ ನೀವೂ ಕೂಡ ಜಾಮೀನಿನ ಮೇಲೆ ಹೊರಗಿದ್ದೀರಿ, ಸಚಿವ ಶ್ರೀರಾಮುಲು ಅವರು ತಮ್ಮ ಅಧಿಕಾರ ಹಾಗೂ ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಸುಪ್ರೀಂವರೆಗೆ ಹೋಗಿ ಈಗ ಜಾರ್ಜ್‌ ಶೀಟ್ ದಾಖಲಾಗಿದೆ ಎಂದು ಮಾಜಿ ಸಂಸದ ಉಗ್ರ​‍್ಪ ವಿವರಿಸಿದರು. ಹಾಗೂ ಈ ಸುದ್ದಿಗೋಷ್ಠಿಯಲ್ಲಿ ದಿವಾಕರ್ ಬಾಬು ಲೋಕೇಶ್ ವಿ ಎಸ್ ಉಗ್ರ​‍್ಪ ಇತರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ