ಬಳ್ಳಾರಿ

ಮೋತಿವೃತ್ತ ಬ್ರೀಡ್ಜ್‌, ದುರ್ಗಮ್ಮ ಗುಡಿ ಬ್ರೀಡ್ಜ್‌ ಅಗಲೀಕರಣ ಕುರಿತು ಸಚಿವ ಶ್ರೀರಾಮುಲು ಚರ್ಚೆ

ಮೋತಿವೃತ್ತ ಬ್ರೀಡ್ಜ್‌, ದುರ್ಗಮ್ಮ ಗುಡಿ ಬ್ರೀಡ್ಜ್‌ ಅಗಲೀಕರಣ ಕುರಿತು ಸಚಿವ ಶ್ರೀರಾಮುಲು ಚರ್ಚೆ

ಬಳ್ಳಾರಿ 14: ಬಳ್ಳಾರಿ ನಗರದ ಹೃದಯಭಾಗದಲ್ಲಿರುವ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಬಳಿಯ ಬ್ರೀಡ್ಜ್‌, ಎಚ್‌.ಆರ್‌.ಗವಿಯಪ್ಪ ವೃತ್ತದ ಬಳಿಯ ಬ್ರೀಡ್ಜ್‌ ಅಗಲೀಕರಣ ಮಾಡುವುದಕ್ಕೆ ಸಂಬಂಧಿಸಿದಂತೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು. 

ಈ ಬ್ರೀಡ್ಜ್‌ಗಳ ಅಗಲೀಕರಣ ಮಾಡುವುದಕ್ಕೆ ಸಂಬಂಧಿಸಿದಂತೆ ಇದುವರೆಗೆ ಕೈಗೊಂಡಿರುವ ಸಿದ್ಧತೆಗಳು, ಸಿದ್ದಪಡಿಸಿದನ ನೀಲನಕ್ಷೆ,ಅಂದಾಜು ಪಟ್ಟಿ,ಅನುಮೋದನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ ಸಲಹೆ-ಸೂಚನೆಗಳನ್ನು ಸಚಿವ ಶ್ರೀರಾಮುಲು ಅವರು ಅಧಿಕಾರಿಗಳಿಗೆ ನೀಡಿದರು. 

ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ,ಎಸ್ಪಿ ಸೈದುಲು ಅಡಾವತ್, ಎಡಿಸಿ ಮಂಜುನಾಥ,ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. 


ಸುದ್ದಿ ಓದಿ