ನಗರ ಸಾರಿಗೆ ಬಸ್ ನಿಲ್ದಾಣ, ಬಸ್ ಡಿಪೋಗೆ ಸಚಿವ ಶ್ರೀರಾಮುಲು ಭೇಟಿ: ಪರೀಶೀಲನೆ
ಬಳ್ಳಾರಿ 30: ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತದ ಬಳಿಯಿರುವ ಹಳೆ ಬಸ್ ನಿಲ್ದಾಣ(ನಗರ ಸಾರಿಗೆ ಬಸ್ ನಿಲ್ದಾಣ)ಕ್ಕೆ ಸಾರಿಗೆ ಸಚಿವರು, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಅಧಿಕಾರಿಗಳ ಜೊತೆಗೂಡಿ ಬುಧವಾರ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ನಗರ ಸಾರಿಗೆ ಬಸ್ ನಿಲ್ದಾಣದೆಲ್ಲೆಡೆ ಸುತ್ತಾಡಿದ ಸಚಿವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಶೌಚಾಲಯಗಳ ಸ್ವಚ್ಛತೆ ಸೇರಿ ಸಮರ್ಕ ನಿರ್ವಹಣೆ ಮಾಡುವಂತೆ ತಿಳಿಸಿದರು.
ನಂತರ ಅದೇ ಬಸ್ ನಿಲ್ದಾಣದ ಸಮೀಪದಲ್ಲಿಯೇ ಸ್ಥಳಾಂತರಿಸಲಾಗಿರುವ ಬಸ್ ಡಿಪೋಗೆ ಭೇಟಿ ನೀಡಿ ಪರೀಶೀಲನೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ಸಚಿವರು ನೀಡಿದರು.
ನಂತರ ಸಚಿವ ಶ್ರೀರಾಮುಲು ಅವರು ಎಸ್ಪಿ ವೃತ್ತದಲ್ಲಿರುವ ಬಸ್ ಡಿಪೋ ಜಾಗವನ್ನು ಪರೀಶೀಲಿಸಿ ಹೊಸದಾಗಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಎನ್ಇಕೆಎಸ್ಆರ್ರ್ಟಿಸಿ ಡಿಸಿ ಇನಾಯತ್ ಭಾಗಬಾನ್, ಡಿಟಿಒ ಚಂದ್ರಶೇಖರಯ್ಯ ಸೇರಿದಂತೆ ಅನೇಕರು ಇದ್ದರು.
--------------------------