ಮುಂದಗೋಡ

ಧರ್ಮಾ ಜಲಾಶಯ ಉತ್ತರಕನ್ನಡ, ಹಾವೇರಿ ಜಿಲ್ಲೆಯ ಭಾಂದವ್ಯಕ್ಕೆ ಸಾಕ್ಷಿ: ಸಚಿವ ಶಿವರಾಮ ಹೆಬ್ಬಾರ

ಧರ್ಮಾ ಜಲಾಶಯ ಉತ್ತರಕನ್ನಡ, ಹಾವೇರಿ ಜಿಲ್ಲೆಯ ಭಾಂದವ್ಯಕ್ಕೆ ಸಾಕ್ಷಿ: ಸಚಿವ ಶಿವರಾಮ ಹೆಬ್ಬಾರ

ಮುಂಡಗೋಡ 16: ಧರ್ಮಾ ಜಲಾಶಯ ಸ್ಥಳಿಯ ರೈತರು ಹಾಗೂ ಹಾವೇರಿ ಜಿಲ್ಲೆಯ ನೂರಾರು ರೈತರ ಬದುಕಿಗೆ ಬೆಳಕಾಗುವ ಮೂಲಕ ಉತ್ತರಕನ್ನಡ ಹಾಗೂ ಹಾವೇರಿ ಜಿಲ್ಲೆಯ ನಡುವೆ ಉತ್ತಮ ಭಾಂದವ್ಯಕ್ಕೆ ಸಾಕ್ಷಿಯಾಗಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. 

ಭಾನುವಾರ ಸಂಜೆ ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯಕ್ಕೆ ಗಂಗಾ ಪೂಜೆ ಸಲ್ಲಿಸುವ ಮೂಲಕ ಬಾಗಿನ ಅರ​‍್ಿಸಿ ಮಾತನಾಡಿದರು. ರೈತರ ಜೀವನಾಡಿಯಾಗಿರುವ ಜಲಾಶಯದ ನೀರನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು. ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ರಾಜ್ಯಕ್ಕೆ ಒಂದು ಹೊಸ ಶಕೆ ಆರಂಭವಾಗಲೆಂದು ಪ್ರಾರ್ಥಿಸುತ್ತೇನೆ ಈ ದಿನ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವಾಗಿದ್ದು, ಇಂತಹ ಸಂದರ್ಭದಲ್ಲಿ ಜಲಾಶಯಕ್ಕೆ ಪೂಜೆ ಸಲ್ಲಿಸಿರುವುದು ಪುಣ್ಯದ ಕೆಲಸ ಎಂದ ಅವರು, ಸತತವಾಗಿ ಮೂರನೆ ಬಾರಿಗೆ ಜಲಾಶಯ ಭರ್ತಿಯಾಗುತ್ತಿದ್ದು, ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿನ ಎಲ್ಲ ಕೆರೆ, ಜಲಾಶಯಗಳು ಭರ್ತಿಯಾಗಿವೆ. ರೈತರಿಗೂ ಮಳೆಯಿಂದ ಪೂರಕ ವಾತಾವರಣ ನಿರ್ಮಾಣವಾಗಿದ್ದು, ರೈತರ ಬಾಳು ಹಸನಾಗಲಿ ಎಂದರು.  

ಹಾವೇರಿ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಧರ್ಮಾ ಜಲಾಶಯದಿಂದ ಹಾವೇರಿ ಜಿಲ್ಲೆಯ 19 ಸಾವಿರ ಎಕರೆ ಭೂಮಿಗೆ ನೀರು ಹಾಯುತ್ತದೆ ಹಾಗೂ 90 ಕೆರೆಗೆ ನೀರು ತುಂಬಿಸಲಾಗುತ್ತಿದೆ ಮತ್ತು ಕುಡಿಯುವ ನೀರು ಸರಬರಾಜು ಆಗುತ್ತದೆ. ಮಳಗಿ ಧರ್ಮಾ ಜಲಾಶಯ ಹಾವೇರಿ ಜಿಲ್ಲೆಯ ಜನರ ಜೀವನಾಡಿಯಾಗಿದೆ ಎಂದರು.  

ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಲ್‌.ಟಿ.ಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ನಾಗಭೂಷಣ ಹಾವಣಗಿ. ತಹಸೀಲ್ದಾರ್ ಶ್ರೀಧರ ಮುಂದಲಮನಿ, ಧುರೀಣ ಮಹೇಶ ಹೊಸಕೊಪ್ಪ, ರೇಖಾ ಅಂಡಗಿ, ಆರ್‌.ಜಿ.ನಾಯ್ಕ, ಗುಡ್ಡಪ್ಪ ಕಾತೂರ, ರಾಜೇಂದ್ರ ನಾಯ್ಕ, ಪ್ರವೀಣ ಡವಳೆ, ಶ್ಯಾಮಲಾ ಹೆಗಡೆ, ಕೃಷ್ಣ ಭರತ್ನಳ್ಳಿ  ಹಾಗೂ ಹಾನಗಲ್ ತಾಲೂಕಿನ ಮುಖಂಡರು ಉಪಸ್ಥಿತರಿದ್ದರು.

ಸುದ್ದಿ ಓದಿ