ಬಳ್ಳಾರಿ

ಕೋವಿಡ್ ಕೇರ್ ಫೀಲ್ಡ್‌ ಆಸ್ಪತ್ರೆಗೆ ಸಚಿವ ಆನಂದಸಿಂಗ್ ಭೇಟಿ

ಕೋವಿಡ್ ಕೇರ್ ಫೀಲ್ಡ್‌ ಆಸ್ಪತ್ರೆಗೆ ಸಚಿವ ಆನಂದಸಿಂಗ್ ಭೇಟಿ

ಬಳ್ಳಾರಿ 29: ಜಿಂದಾಲ್ ಕಾರಖಾನೆಯ ಎದುರುಗಡೆಯ ವಿಶಾಲ ಮೈದಾನದಲ್ಲಿ ಸ್ಥಾಪಿಸಲಾಗಿರುವ 1ಸಾವಿರ ಆಕ್ಸಿಜನ್ ಹಾಸಿಗೆಗಳ ಕೋವಿಡ್ ಕೇರ್ ಫೀಲ್ಡ್‌ ಆಸ್ಪತ್ರೆಗೆ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್‌ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಶನಿವಾರ ಭೇಟಿ ನೀಡಿ ಪರೀಶೀಲನೆ ನಡೆಸಿದರು. 

ಆಸ್ಪತ್ರೆಯಲ್ಲಿ ದಾಖಲಾಗಿರುವ ಸೊಂಕಿತರೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಯೋಗಕ್ಷೇಮ ವಿಚಾರಿಸಿದರು. ಚಿಕಿತ್ಸೆ ಹೇಗೆ ನೀಡಲಾಗುತ್ತಿದೆಯೇ..?,ಓಷಧಿ ಸರಿಯಾಗಿ ಕೊಡುತ್ತಿದ್ದಾರೆಯೇ..?,ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಬಂದು ತಪಾಸಣೆ ಮಾಡುತ್ತಿದ್ದಾರೆಯೇ..?,ಊಟ ಹೇಗಿದೆ ಎಂಬುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಸೊಂಕಿತರೊಂದಿಗೆ ಚರ್ಚೆ ನಡೆಸಿದರು. 

ನಂತರ ಅವರು ಆಸ್ಪತ್ರೆಯ ಹೊರಗಡೆ ಕುಳಿತಿದ್ದ ಸೊಂಕಿತರ ಸಂಬಂಧಿಕರೊಂದಿಗೂ ಮಾತನಾಡಿದ್ದು ಕಂಡುಬಂದಿತು.ಇದಾದ ನಂತರ ಅವರು ಆಸ್ಪತ್ರೆಯ ನೋಡಲ್ ಅಧಿಕಾರಿಗಳಾದ ಸಿದ್ರಾಮಪ್ಪ ಚಳಕಾಪುರೆ, ಡಾ.ದೇವಾನಂದ,ಡಾ.ಮರಿರಾಜ್ ಹೂಗಾರ ಸೇರಿದಂತೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. 


ಸುದ್ದಿ ಓದಿ