ಮುಂಡರಗಿ

ಸೂಕ್ಷ್ಮ ನೀರಾವರಿ ಯೋಜನೆಯ ಪರಿಕರಗಳ ವಿತರಣಾ ಸಮಾರಂಭ

ಸೂಕ್ಷ್ಮ ನೀರಾವರಿ ಯೋಜನೆಯ ಪರಿಕರಗಳ ವಿತರಣಾ ಸಮಾರಂಭ

ಮುಂಡರಗಿ 13:  ಕೃಷಿ ಇಲಾಖೆಯಿಂದ ಒಂದು ಬಾರಿ ಹನಿ ನೀರಾವರಿ ಯೋಜನೆಯನ್ನು ಪಡೆದುಕೊಂಡ ರೈತರಿಗೆ ಪುನಃ ಏಳು ವರ್ಷಗಳ ಕಾಲ ಅದೇ ಯೋಜನೆಯನ್ನು ಪಡೆದುಕೊಳ್ಳಲು ಬರುವುದಿಲ್ಲ. ಆದ್ದರಿಂದ ರೈತರು ತಮಗೆ ಮೀಸಲಿರುವ ಯೋಜನೆಗಳನ್ನು ಅನ್ಯರಿಗೆ ನೀಡಬಾರದು ಎಂದು ಶಾಸಕ ಡಾ.ಚಂದ್ರು ಲಮಾಣಿ ಸಲಹೆ ನೀಡಿದರು. 

ತಾಲ್ಲೂಕು ಕೃಷಿ ಇಲಾಖೆಯು ಶನಿವಾರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಹನಿ ನೀರಾವರಿ ಹಾಗೂ ಸೂಕ್ಷ್ಮ ನೀರಾವರಿ ಯೋಜನೆಯ ಪರಿಕರಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. 

ಹನಿ ನೀರಾವರಿ ಯೋಜನೆಯನ್ನು ಸಮರ​‍್ಕವಾಗಿ ಅನುಷ್ಠಾನಗೊಳಿಸದೆ ಕೆಲವು ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿದೆ ಎಂದು ರೈತರಿಂದ ಸಹಿ ಪಡೆದುಕೊಳ್ಳುತ್ತಿದ್ದಾರೆ. ರೈತರು ತಮ್ಮ ಜಮೀನಿನಲ್ಲಿ ಸಮರ​‍್ಕವಾಗಿ ನೀರು ಹರಿಯದ ಹೊರತು ಯಾವ ಪತ್ರಗಳಿಗೂ ಸಹಿ ಮಾಡಬಾರದು ಎಂದು ಕಿವಿ ಮಾತು ಹೇಳಿದರು. 

ತಾಲ್ಲೂಕಿನ ಕಕ್ಕೂರು ಹಾಗೂ ಜಾಲವಾಡಿಗೆ ಏತ ನೀರಾವರಿ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರೊದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಶಿಂಗಟಾಲೂರ ಏತ ನೀರಾವರಿ ಯೋಜನೆಯು ಅಸಮರ​‍್ಕವಾಗಿದ್ದು, ಕೆಲವು ಗ್ರಾಮಗಳ ಜಮೀನುಗಳಿಗೆ ಈವರೆಗೂ ನೀರು ಹರಿಯದಂತಾಗಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಮಾತನಾಡಿ, ರೈತರಿಗೆ ತಮ್ಮ ಬೆಳೆ ಸಮೀಕ್ಷೆಗೆ ಅವಕಾಶ ನೀಡಲಾಗಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ತಾವೆ ದೃಡೀಕರಿಸಬಹುದಾಗಿದೆ. ರೈತರ ಆದಾಯವನ್ನು ವೃದ್ಧಿಸುವ ಸಲುವಾಗಿ ಕೃಷಿ ಯಾಂತ್ರೀಕರಣಕ್ಕೆ ಆಧ್ಯತೆ ನೀಡಲಾಗುತ್ತಿದ್ದು, ರಿಯಾಯಿತಿ ದರದಲ್ಲಿ ಯಂತ್ರಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.  

ರೈತರ ಹಿತದೃಷ್ಟಿಯಂದ ಕೃಷಿ ಇಲಾಖೆಯು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅರ್ಹ ರೈತರು ಸಕಾಲದಲ್ಲಿ ಅವುಗಳಿಗೆ ಅರ್ಜಿ ಸಲ್ಲಿಸಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಇಲಾಖೆಯ ಯೋಜನೆಗಳನ್ನು ಸಮರ​‍್ಕವಾಗಿ ಪಡೆದುಕೊಳ್ಳಲು ಎಲ್ಲ ರೈತರು ಎಫ್‌.ಐ.ಡಿ. ಮಾಡಿಸಬೇಕು ಎಂದು ಮನವಿ ಮಾಡಿಕೊಂಡರು. 

ಹಿರಿಯ ಕೃಷಿ ಅಧಿಕಾರಿ ಶಿವಮೂರ್ತಿ ನಾಯಕ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗೀರೀಶ ಹಾವಿನಾಳ, ಪುರಸಭೆ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ಶಿವಾನಂದ ಬಾರಕೇರ, ಜ್ಯೋತಿ ಹಾನಗಲ್ಲ, ಶಿವಪ್ಪ ಚಿಕ್ಕಣ್ಣವರ, ಮುಖಂಡರಾದ ಮೈಲಾರೆಪ್ಪ ಕಲಕೇರಿ, ಪವಿತ್ರಾ ಕಲ್ಲಕುಟಿಗರ, ಅರುಣಾ ಪಾಟೀಲ, ವಿನಾಯಕ ಕರಿಬಿಸ್ತಿ ಇತರರು ಇದ್ದರು. 


ಸುದ್ದಿ ಓದಿ