ಮಹಾನಗರವು ಮೂಲಭೂತ ಸೌಕರ್ಯಗಳಿಂದ ವಂಚಿತ: ಮಂಜುನಾಥ
ಬಳ್ಳಾರಿ : ನಗರದಲ್ಲಿ ಆಮ್ ಆದ್ಮಿ ಪಕ್ಷದ ನಗರ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಯಾದ ಜೆವಿ ಮಂಜುನಾಥ ಆದ ನಾನು ಪಕ್ಷದ ಸಕ್ರಿಯ ಕಾರ್ಯಕರ್ತರೊಡನೆ ಮಂಗಳವಾರ ಸಂಜೆ ಬಳ್ಳಾರಿಯ ಮಹಾನಗರದ 02, ಮತ್ತು 03ನೇ ವಾರ್ಡಿನ, ಜೈನ್ ಮಾರ್ಕೆಟ್, ಗೌಳೇರಹಟ್ಟಿ, ಗ್ಲಾಸ್ ಬಜಾರ್, ಬ್ರಾಹ್ಮಣ ಬೀದಿ, ಎಲ್ ಏನ್ ಟೆಂಪಲ್ ಸ್ಟ್ರೀಟ್,ಪ್ರದೇಶದಲ್ಲಿ ಮನೆಮನೆಗೆ ತೆರಳಿ ಪಕ್ಷದ ಪ್ರಚಾರವನ್ನು ಮಾಡಲಾಯಿತು. ಆದ್ದರಿಂದ ನಮ್ಮ ಪಕ್ಷವು ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಜನರ ಧ್ವನಿಯಾಗಿ ಆಡಳಿತವನ್ನು ನಿರ್ವಹಿಸುತ್ತಿದ್ದು ಪ್ರಮುಖವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿ, ಕೃಷಿಕರಿಗಾಗಿ ಯೋಜನೆಗಳು, ಯುವಕರ ಪರವಾದಂತ ಯೋಜನೆಗಳು, ಮನೆಬಾಗಿಲಿಗೆ ಸರ್ಕಾರಿ ಸೌಲಭ್ಯ, ಮನೆ ಬಾಗಿಲಿಗೆ ಪಡಿತರ, 200 ಯೂನಿಟ್ ಉಚಿತ ವಿದ್ಯುತ್, 20,000 ಲೀಟರ್ ಉಚಿತ ನೀರು, ಹೀಗೆ ಅನೇಕ ನಮ್ಮ ಪಕ್ಷದ ಅಭಿವೃದ್ಧಿಯ ಕೆಲಸಗಳ ಬಗ್ಗೆ ತಿಳಿಸಲಾಯಿತು. ಮತ್ತುನಮ್ಮ ಬಳ್ಳಾರಿ ನಗರವು ಮಹಾನಗರ ಪಾಲಿಕೆಯಾಗಿ ಸುಮಾರು 16 ವರ್ಷಗಳೇ ಕಳೆದರೂ ಮತ್ತು ಕಲ್ಯಾಣ ಕರ್ನಾಟಕ,ಡಿಎಂಎಫ್ ,ಎಸಿಪಿ ಟಿಎಸ್ಪಿ, ಮಹಾನಗರ ಪಾಲಿಕೆಯ ನಿಧಿ, ಶಾಸಕರುಗಳ ಅನುದಾನ ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರುಗಳ ಅನುದಾನ ಜಿಲ್ಲಾ ಮಂತ್ರಿಗಳ ಅನುದಾನ ಹೀಗೆ ಇನ್ನೂ ಅನೇಕ ನಿಧಿಗಳಿಂದ ಹಣದ ಸುರಿಮಳೆಯೇ ಆದರೂ, ಬಳ್ಳಾರಿ ಮಹಾನಗರವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ, ಆದುದರಿಂದ ಭ್ರಷ್ಟಾಚಾರ ಮುಕ್ತವಾದ ಜನಸಾಮಾನ್ಯರ ಪಕ್ಷವಾದ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿದಲ್ಲಿ, ಮುಂದಿನ ಐದು ವರ್ಷಗಳಲ್ಲಿ ಬದಲಾವಣೆಯ ಬಳ್ಳಾರಿಯನ್ನು ಕಾಣಬಹುದು, ಬಳ್ಳಾರಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಆಮ್ ಆದ್ನಿ ಪಕ್ಷಕ್ಕೆ ಮತ ನೀಡಿ ಬೆಂಬಲಿಸಿ ಎಂದು ಜೆ.ವಿ. ಮಂಜುನಾಥ್ ರವರು ಕರೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಟಿ ಕುರಣ್ ಕುಮಾರ್, ಸಂಘಟನಾ ಕಾರ್ಯದರ್ಶಿಯಾದ ದೇವಿನಗರ ಕಲಂದರ್ , ಯುವ ಮುಖಂಡರಾದ ಅಮಿತ್ ಕುಮಾರ್, ಶೇಖರ್ , ಪಕ್ಷದ ಸಕ್ರಿಯ ಕಾರ್ಯಕರ್ತರುಗಳಾದ, ಬಿ ಸುರೇಶ್ ನಾಯಕ್ , ಭಾಸ್ಕರ್ ರೆಡ್ಡಿ, ಶ್ರೀಕಾಂತ್ , ರಫೀಕ್ , ಮಸ್ತಾನ್ ನಾಗರಾಜ, ಜೋಗಿ,ಗೌಸ್, ರಾಜೇಶ್, ನಟರಾಜ್ , ಮುಂತಾದ ಸಕ್ರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.