ಕಾಗವಾಡ

ಸದಸ್ಯರು ಪಕ್ಷಭೇಧ ಬದಿಗಿಟ್ಟು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ: ರಾಜು ಕಾಗೆ

ಸದಸ್ಯರು ಪಕ್ಷಭೇಧ ಬದಿಗಿಟ್ಟು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ: ರಾಜು ಕಾಗೆ

ಕಾಗವಾಡ, 11 ; ಪಟ್ಟಣ ಪಂಚಾಯತಿ ಸದಸ್ಯರು ಪಕ್ಷಭೇಧ ಮರೆತು, ಕೇವಲ ತಮ್ಮ ವಾರ್ಡಿಗೆ ಸೀಮಿತಗೊಳ್ಳದೇ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ. ಅವರು, ಶುಕ್ರವಾರ ದಇ. 11 ರಂದು ತಾಲೂಕಿನ ಶೇಡಬಾಳ ಪಟ್ಟಣ ಪಂಚಾಯತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು. ರಾಜ್ಯ ಸರ್ಕಾರ ಪಟ್ಟಣ ಪಂಚಾಯತಿಗಳ ವ್ಯಾಪ್ತಿಗೆ ಬರುವ ಎಲ್ಲ ಸಾರ್ವಜನಿಕರಿಗೆ ಸಮರ​‍್ಕವಾಗಿ ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ಚರಂಡಿ, ಬೀದಿ ದೀಪಗಳು ಸೇರಿದಂತೆ ಮೂಲಸೌಕರ್ಯಗಳನ್ನು ನೀಡುವುದು ಆದ್ಯ ಕರ್ತವ್ಯ. ಎಲ್ಲ ಸದಸ್ಯರು ಪಕ್ಷ ಭೇದ ಮರೆತು, ಸಾರ್ವಜನಿಕರ ಸೇವೆ ಮಾಡಿ, ನಿಮಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.  

ಶೇಡಬಾಳ ಸ್ಟೇಶನ್‌ದಲ್ಲಿ ಈ ವರೆಗೆ ಸ್ಮಶಾನ ಭೂಮಿಯೇ ಇಲ್ಲಾ. ಇದರ ವ್ಯವಸ್ಥೆ ಮಾಡಬೇಕು. ಮತ್ತು ಸರ್ಕಾರಿ ರಸ್ತೆ ಅನಧಿಕೃತವಾಗಿ ಒತ್ತುವರಿ ಮಾಡಿದ್ದನ್ನು ತೆರವುಗೊಳಿಸುವ ಕಾರ್ಯ ಮಾಡಬೇಕೆಂದು ಸದಸ್ಯರು ಪ್ರಶ್ನಿಸಿದರು. ಅದಕ್ಕೆ ಶಾಸಕರು ಸ್ಪಂದಿಸಿ, ಕೂಡಲೇ ಇದರ ಬಗ್ಗೆ ಕ್ರಮ ಜರುಗಿಸಲು ಮುಖ್ಯಾಧಿಕಾರಿಗೆ ಆದೇಶ ನೀಡಿದರು.ಸಭೆಯಲ್ಲಿ ಸುಧೀರ ಮಾಳಪ್ಪಗೋಳ ವರದಿ ವಾಚನ ಮಾಡಿದರು.ಈ ವೇಳೆ ಪಟ್ಟಣ ಪಂಚಾಯತಿ ಅಧ್ಯಕ್ಷ ಉತ್ಕರ್ಷ ಪಾಟೀಲ, ಉಪಾಧ್ಯಕ್ಷೆ ದೀಪಾ ಹೊನಕಾಂಬಳೆ, ಮುಖ್ಯಾಧಿಕಾರಿ ಸುರೇಶ ಪತ್ತಾರ, ಸದಸ್ಯರಾದ ಮಹಾಧವಲ ಯಾದವಾಡ, ರಾಜು ಚೌಗುಲೆ, ಅನ್ನಪ್ಪಾ ಮಾಕನ್ನವರ, ಬಾಬು ಐನಾಪೂರೆ, ರಮೇಶ ರತ್ನಪ್ಪಗೋಳ, ಅನೀಲ ಮಾಲಗಾಂವೆ, ರಾಮು ನರಸಾಯಿ, ರಶೀದಾ ಮೇಸ್ತೊ ಸ್ವಾತಿ ಜಗತಾಪ, ಸುಲಭಾ ಪಾಟೀಲ, ರೇಣುಕಾ ಹೊನಕಾಂಬಳೆ, ಶೃತಿ ಮಾಳಗೆ, ಶೈಲಾ ಢಾಲೆ, ರೋಹಿಣಿ ಮಾಳಿ, ಕಿರಿಯ ಅಭಿಯಂತ ತಿರುಪತಿ ಲಮಾಣಿ ಸೇರಿದಂತೆ ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು 


ಸುದ್ದಿ ಓದಿ