ಹಗರಿಬೊಮ್ಮನಹಳ್ಳಿ

ಮೆಹಬೂಬ್ ಸುಭಾನಿ ಉರುಸು: ಟಗರಿನ ಕಾಳಗ

ಮೆಹಬೂಬ್ ಸುಭಾನಿ ಉರುಸು: ಟಗರಿನ ಕಾಳಗ

ಹಗರಿಬೊಮ್ಮನಹಳ್ಳಿ.ನ.09 : ಟಗರಿನ ಕಾಳಗ ಒಂದು ಪುರಾತನ ಕ್ರೀಡೆಯಾಗಿದೆ, ಇಂಥ ಕ್ರೀಡೆಗಳು ಜನರಲ್ಲಿ ಪ್ರಾಣಿಗಳ ಬಗ್ಗೆ ಗೌರವ ಭಾವನೆ ಮೂಡಬೇಕಾಗಿದೆ ಎಂದು ಯುವ ನಾಯಕ ಆಶೋಕ ನಾಯ್ಕ ಹೇಳಿದರು. 

ತಾಲೂಕಿನ ಕಡಲಬಾಳು ಗ್ರಾಮದ ಹಜರತ್ ಮೆಹಬೂಬ್ ಸುಭಾನಿ ಬಗದಾದಿ 49ನೇ ವರ್ಷದ ಉರುಸು ನಿಮಿತ್ತ ಏರಿ​‍್ಡಸಿದ ಟಗರಿನ ಕಾಳಗ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಅವರು ಟಗರಿನ ಕಾಳಗವೆಂದರೆ ನೋಡುವವರ ಗುಂಡಿಗೆ ಗಟ್ಟಿಯಾಗಿರಬೇಕು ಹಾಗೂ ಪ್ರಾಣಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತದಾಗಿದೆ,  ಕಾಳಗದಲ್ಲಿ ಸೋಲು ಗೆಲವು ಸಹಜ ಎಲ್ಲಾವನ್ನು ಸಮತೋಲನದಿಂದ ಮಾಲಿಕರು ಗೌರವಿಸಬೇಕೆಂದು ಹೇಳಿದರು. 

ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾಹಿರಾಬಾನು ಮಾತನಾಡಿ ಸ್ಪರ್ಧೆಗಾಗಿ ತಯಾರು ಮಾಡಿದ ಟಗರು ಗೆದ್ದಾಗ ಮಾಲಿಕನಿಗೆ ಆಗುವ ಖುಷಿ ಅಷ್ಟಿಷ್ಟಲ್ಲ ಆದರೆ ಸೋತ ಟಗರಿನ ಮಾಲೀಕ ಪ್ರಾಣಿಯನ್ನು ಯಾವುದೇ ಕಾರಣಕ್ಕೂ ಹಿಂಸೆ ಮಾಡಿದರೆ ಅದೂ ಟಗರಿನ ಕಾಳಗಕ್ಕೆ ಮಾಡಿದ ಮೋಸ ಎಂದರು ಟಗರುಗಳು ಒಂದಕ್ಕೋಂದು ಗುದ್ದುವುದರ ಮೂಲಕ ಕಾಳಗ ನೆಡಸಿ ನೆರದಿದ್ದ ನೂರಾರು ಜನರಲ್ಲಿ ರೋಮಾಂಚನ ಮೋಡಿಸಿದವು ಪ್ರಕ್ಷಕರನ್ನು ಆಖಾಡಕ್ಕೆ ಬಾರದಂತೆ ವ್ಯವಸ್ಥಾಪಕರು ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದರು. 

ಈ ವೇಳೆ ಮುಖಂಡರಾದ ಮೊದ್ದಿನ್ ಸಾಬ್, ವೆಂಕಟೇಶ, ಆನಂದ, ಶಿವು, ಶ್ರಿಶೈಲ, ನಾಗರಾಜ, ರಾಮೇಶ, ವಿಶ್ವನಾಥ, ಬಡಲಾಡಕಿ ನಾಗರಾಜ ಇತರರು ಇದ್ದರು. 


ಸುದ್ದಿ ಓದಿ