ಡಾರ್ಲಿಂಗ್ ಕೃಷ್ಣಾಗೆ ಮೇಘಾ ಶೆಟ್ಟಿ ಜೋಡಿ!
ಬೆಂಗಳೂರು, ಸೆ. 25 ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಜನಪ್ರಿತೆ ಪಡೆದಿರುವ ಮೇಘಾ ಶೆಟ್ಟಿ, ಸ್ಯಾಂಡಲ್ ವುಡ್ ನಲ್ಲಿ ಅವಕಾಶಪಡೆದುಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.
ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಚಿತ್ರೀಕರಣ ಕೂಡ ಮುಕ್ತಾಯಗೊಂಡಿದೆ.
ಇದೀಗ ಮತ್ತೊಂದು ಚಿತ್ರಕ್ಕೆ ಮೇಘಾ ಶೆಟ್ಟಿ ಸಹಿ ಹಾಕಿದ್ದಾರಂತೆ. ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಇನ್ನೂ ಹೆಸರಿಡದ ನೂತನ ಚಿತ್ರಕ್ಕೆ ನಿಶ್ವಿಕಾ ನಾಯ್ಡು ಹಾಗೂ ಮೇಘಾ ಶೆಟ್ಟಿ ನಾಯಕಿಯರಾಗಿದ್ದಾರಂತೆ.