ವಿಜಯಪುರ

ಜು. 19 ರಂದು ಕುರಿ ಸಾಕಾಣಿಕೆ, ಉಣ್ಣೆ ಉತ್ಪಾದಕರ ಸಂಘದ ಸಭೆ

ಜು. 19 ರಂದು ಕುರಿ ಸಾಕಾಣಿಕೆ, ಉಣ್ಣೆ ಉತ್ಪಾದಕರ ಸಂಘದ ಸಭೆ

ಲೋಕದರ್ಶನ ವರದಿ 

ವಿಜಯಪುರ 17 : ಜಿಲ್ಲಾ ಕುರುಬರ ಕುರಿ ಸಾಕಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ವಿಶೇಷ ಸರ್ವ ಸಾಧಾರಣ ಸಾಮಾನ್ಯ ಸಭೆ ಇದೆ ಜುಲೈ 19 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೇಂದ್ರ ಬಸ್ ನಿಲ್ದಾಣ ಬಳಿಯಿರುವ  ನರಸಿಂಹ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. 

ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ವಿಶೇಷ ಅಧಿಕಾರಿ ಮತ್ತು ಸಹಕಾರ ಅಭಿವೃದ್ಧಿ ಅಧಿಕಾರಿ ಆರ್‌. ಎಸ್‌. ಆಳೂರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.  ಸಂಘದ ಸರ್ವ ಸದಸ್ಯರು ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಬಹುದಾಗಿದೆ ಎಂದು ಸಂಘದ ಕಾರ್ಯದರ್ಶಿ ಶಂಕರ ಬಾಡಗಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ