ಧಾರವಾಡ - ಹುಬ್ಬಳ್ಳಿ

ಅರುಣ ಐಹೊಳೆ ನೇತೃತ್ವದಲ್ಲಿ ಮಾದಾರ ಚೆನ್ನಯ್ಯ ಸೇವಾ ಸಮಿತಿ ಸಭೆ

ಅರುಣ ಐಹೊಳೆ ನೇತೃತ್ವದಲ್ಲಿ ಮಾದಾರ ಚೆನ್ನಯ್ಯ ಸೇವಾ ಸಮಿತಿ ಸಭೆ

ಲೋಕದರ್ಶನ ವರದಿ 

            ಧಾರವಾಡ 29 ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸಮಾಜ ನಿರ್ಮಾಣ ಮಾದಾರ ಚನ್ನಯ್ಯ ಸೇವಾಸಮಿತಿಯ ಗುರಿ : ಅರುಣ್ ಐಹೊಳೆ. ಮಾದಾರ ಚನ್ನಯ್ಯ ಸೇವಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಸನ್ಮಾನ್ಯ   ಅರುಣ ಐಹೊಳೆ ಅವರ ನೇತೃತ್ವದಲ್ಲಿ ಧಾರವಾಡ ಹಾಗೂ ಸುತ್ತಲಿನ ಮಂಡಲಗಳ ಸಂಘಟನಾತ್ಮಕ ಸಭೆಯು ಧಾರವಾಡದ ಸರ್ಕ್ಯೂಟ್ ಹೌಸ್ನಲ್ಲಿ ಸಂಜೆ 6 ಗಂಟೆಗೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಸಹದೇವ ಮಾಳಗಿ ಅವರು ವಹಿಸಿದ್ದರು.                     ಸೇವಾಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಕೊಂಡಪಲ್ಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ದೊಡ್ಡಮನಿ,   ಪ್ರಕಾಶ ಗುಡಿಹಾಳ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷರಾದ   ಅರುಣ ಐಹೊಳೆ ಅವರು ಧಾರವಾಡ ಜಿಲ್ಲೆಯ ಎಲ್ಲ ಮಂಡಲಗಳ ವರದಿ ಪಡೆದು ಸಂಘಟನೆಯನ್ನು ಇನ್ನಷ್ಟು ವಿಸ್ತರಿಸಿ ಬಲಪಡಿಸುವಂತೆ ಕರೆ ನೀಡಿದರು.

                   ಡಿಸೆಂಬರ್ 6ರಂದು ಚಿತ್ರದುರ್ಗದ ಶ್ರೀಮಠದಲ್ಲಿ ನಡೆಯಲಿರುವ ಮಾಸಿಕ ಸಭೆಯೊಳಗೆ ಸಮಿತಿಗಳ ರಚನೆ ಪೂರ್ಣಗೊಳಿಸಿ, ಪದಾಧಿಕಾರಿಗಳ ಪಟ್ಟಿ ಹಾಗೂ ಸಂಪೂರ್ಣ ಸಂಘಟನಾತ್ಮಕ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧ್ಯಕ್ಷರಿಗೆ ಸೂಚಿಸಿದರು. ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ   ಮಂಜುನಾಥ ಕೊಂಡಪಲ್ಲಿ ಅವರು ಮಾಸಿ ಹೋಗುತ್ತಿರುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ತಳಹದಿಯ ಮೇಲೆ ಪರಮಪೂಜ್ಯ ಮಾದಾರಶ್ರೀಗಳ ಪಾವನ ಮಾರ್ಗದರ್ಶನದಲ್ಲಿ ಮಾದಿಗ ಸಮುದಾಯವನ್ನು ಸದೃಢವಾಗಿಸುವುದು.

                     ಮಾದಾರ ಚನ್ನಯ್ಯ ಸೇವಾಸಮಿತಿಯ ಉದ್ದೇಶವಾಗಿದೆ ಎಂದು ನುಡಿದರು. ಸಭೆಯಲ್ಲಿ ಪ್ರೊ.   ಶಿವಶರಣ, ಮಹಾನಗರ ಪಾಲಿಕೆ ಸದಸ್ಯರಾದ   ಶಂಕರ ಹೊಸಮನಿ,   ಸಂಗಮೇಶ ಮಾದರ,   ಪರಮೇಶ್ವರ ಮಾದರ,   ಬಸವರಾಜ ಚಳಗೇರಿ,   ಮಂಜುನಾಥ ಪರಸಾಪುರ,   ಶರೀಫ್ ಹರಿಜನ,   ಅಜಿತ ಮಾದರ,  ಚಿದಾನಂದ, ಶ್ರೀಕಾಂತ ಉಳ್ಳಿಗೇರಿ,  ನಿಂಗಪ್ಪ ಮಾದರ,   ಪರಶುರಾಮ ಮಲ್ಯಾಳ,   ಯಲ್ಲಪ್ಪ ಜಕ್ಕನೂರು ಸೇರಿದಂತೆ ಇನ್ನೂ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ