ಬಳ್ಳಾರಿ

ಬೆಳೆ ನಷ್ಟ ಪರಿಹಾರ ನೀಡಲು ಮೀನಹಳ್ಳಿ ತಾಯಣ್ಣ ಒತ್ತಾಯ

ಬೆಳೆ ನಷ್ಟ ಪರಿಹಾರ ನೀಡಲು ಮೀನಹಳ್ಳಿ ತಾಯಣ್ಣ ಒತ್ತಾಯ

ಲೋಕದರ್ಶನ ವರದಿ 

ಬಳ್ಳಾರಿ 18: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರೈತರು ಬೆಳೆ ಸಂಪೂರ್ಣ ಹಾನಿಯಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ದಮ್ಮೂರು ಗ್ರಾಮಕ್ಕೆ ಜನತಾದಳ (ಜಾತ್ಯತೀತ) ಪಕ್ಷದ ಜಿಲ್ಲಾಧ್ಯಕ್ಷ ಮೀನಹಳ್ಳಿ ತಾಯಣ್ಣ, ರಾಜ್ಯ ಉಪಾಧ್ಯಕ್ಷ ಮುನ್ನಾಬಾಯಿ ಅವರು ಗ್ರಾಮದ ಬಿ. ಮರಿಯಪ್ಪ ಎಂಬುವರ ಹೊಲಕ್ಕೆ ಭೇಟಿ ನೀಡಿ ಮೆಣಸಿನಕಾಯಿ ಬೆಳೆ ಹಾನಿಯಾಗಿರುವುದನ್ನು ಪರೀಶೀಲಿಸಿದರು.  


ಇದೇ ವೇಳೆ ಮಾತನಾಡಿದ ಮೀನಹಳ್ಳಿ ತಾಯಣ್ಣ ಅವರು, ಮೆಳೆಯಿಂದ ರೈತರ ಮೆಣಸಿನಕಾಯಿ ಮತ್ತು ಹತ್ತಿ ಬೆಳೆ ಸಂಪೂರ್ಣ ಹಾನಿಯಾಗಿ ಒಂದು ತಿಂಗಳು ಕಳೆಯುತ್ತಾ ಬಂದರೂ ಸಹ ರೈತರ ಬಗ್ಗೆ ಈವರೆಗೂ ಯಾರು ಗಮನಹರಿಸದರುವುದು ದುರದೃಷ್ಟಕರ ಸಂಗತಿ. ಒಂದು ಮೆಣಸಿನಕಾಯಿ ಮತ್ತು ಹತ್ತಿ ಬೆಳೆಗೆ ಒಂದು ಲಕ್ಷ ರು. ಖರ್ಚು ಮಾಡಲಾಗಿದೆ. ಆದರೆ, ಈಗ ಮೆಣಸಿನಕಾಯಿ ಒಂದು ಎಕರೆಗೆ ಒಂದು ಕ್ವಿಂಟಾಲ್ ಸಹ ಆಗುತ್ತಿಲ್ಲ. ಪರಿಸ್ಥಿತಿ ಈಗಿದ್ದಾಗ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.  


ಇದೇ ವೇಳೆ ರೈತ ಬಿ. ಮರಿಯಪ್ಪ ಅವರು ಹೊಲಕ್ಕೆ ಬೇಟಿ ನೀಡಿದ ಜೆಡಿಎಸ್ ಮುಖಂಡರೊಂದಿಗೆ ಮಾತನಾಡಿ, ಈ ಹಿಂದೆ ಕುಮಾರಸ್ವಾನಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬೆಳೆ ಹಾನಿ ಆಗಿದ್ದಾಗ, ಕೂಡಲೇ ಅವರು ಸಾಲ ಮನ್ನಾ ಮಾಡಿ ರೈತರ ನೆರವಿಗೆ ಬಂದಿದ್ದರು. ಆದರೆ, ಈಗ ರೈತರ ಬೆಳೆ ಸಂಪೂರ್ಣ ಹಾನಿ ಆಗಿ ಒಂದು ತಿಂಗಳು ಕಳೆದರೂ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.  

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಚಾಗನೂರು ನಾಗರಾಜ, ಮೀನಹಳ್ಳಿ ಬಸಪ್ಪ, ಹಾಜಿ ಬಾಬಾ ಖಾನ್, ರಾಘವರೆಡ್ಡಿ ಸೇರಿದಂತೆ ಮತ್ತಿತರರು ಹಾಜರಿದ್ದರು. 


ಸುದ್ದಿ ಓದಿ