ಬಳ್ಳಾರಿ

2023ಕ್ಕೆ ಕುಮಾರಣ್ಣರನ್ನು ಸಿಎಂ ಮಾಡಲು ಪಕ್ಷ ಸಂಘಟಿಸಲು ಮೀನಹಳ್ಳಿ ತಾಯಣ್ಣ ಕರೆ

2023ಕ್ಕೆ ಕುಮಾರಣ್ಣರನ್ನು ಸಿಎಂ ಮಾಡಲು ಪಕ್ಷ ಸಂಘಟಿಸಲು ಮೀನಹಳ್ಳಿ ತಾಯಣ್ಣ ಕರೆ

ಬಳ್ಳಾರಿ 16: ಜನತಾದಳ (ಜಾತ್ಯತೀತ) ಪಕ್ಷದ ಮುಖಂಡರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಆದ ಸನ್ಮಾನ್ಯ ಹೆಚ್‌.ಡಿ.ಕುಮಾರಸ್ವಾಮಿ ಅವರ 63ನೇ ಜನ್ಮದಿನದ ಅಂಗವಾಗಿ ಗುರುವಾರ ನಗರದ  ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಮುಖಂಡರು  ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸುವ ಮೂಲಜ ಅನ್ನದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.  

ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಮೀನಹಳ್ಳಿ ಡಿ ತಾಯಣ್ಣ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಪಕ್ಷದ ವರಿಷ್ಠರು ಮತ್ತು ಮುಖಂಡರು ನನ್ನ ಮೇಲೆ ನಂಬಿಕೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಿರುಗುಪ್ಪ, ಸಂಡೂರು, ಕಂಪ್ಲಿ, ಕುರುಗೋಡು ಮತ್ತು ಬಳ್ಳಾರಿ 5 ತಾಲೂಕುಗಳಲ್ಲಿ ಪಕ್ಷವನ್ನು ಸಂಘಟಿಸಲು ಒತ್ತು ನೀಡಲಾಗುವುದು ಎಂದರು.  

ಅಲ್ಲದೆ, ಮುಂದಿನ 2023 ರಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಲು ಪ್ರತಿಯೊಬ್ಬ ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಬೇಕು. ಬಳ್ಳಾರಿ ಜಿಲ್ಲೆಯಲ್ಲಿರುವ 5 ವಿಧಾನ ಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ಇಬ್ಬರು ಎಂಎಲ್‌ಎ ಗಳನ್ನಾದರೂ ಗೆಲ್ಲಿಸಿ ವಿಧಾನ ಸೌಧಕ್ಕೆ ಕಳಿಸಬೇಕು. ಈ ನಿಟ್ಟಿನಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಇಂದಿನಿಂದಲೇ ಪಕ್ಷವನ್ನು ಸಂಘಟಿಸಲು ಮುಂದಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮುನ್ನಾಬಾಯಿ, ಯುವ ಜನತಾದಳ ಜಿಲ್ಲಾಧ್ಯಕ್ಷ ಡಿ.ವಿಜಯಕುಮಾರ್, ಮುಖಂಡರಾದ ಗೋಪಾಲ್, ಬಂಡೇಗೌಡ, ವಾದಿರಾಜಶೆಟ್ಟಿ, ಮಿಲ್ಲರ್ ಪೇಟೆ ವನ್ನೂರಸ್ವಾಮಿ (ವಂಡ್ರಿ) ಹಾಜಿ ಬಾಬಾಖಾನ್, ಚಾಗನೂರು ನಾಗರಾಜ್, ಮೀನಹಳ್ಳಿ ಬಸಪ್ಪ ಮಹಿಳಾ ಮುಖಂಡರಾದ ಪುಷ್ಪಾ, ರಾಮೇಶ್ವರಿ, ಕೋಮಲಾ, ಜಯಲಕ್ಷ್ಮೀ, ಜಮಿಲಾ, ಭವಾನಿ, ಉಷಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ