ಹಗರಿಬೊಮ್ಮನಹಳ್ಳಿ

ಕೋವಿಡ್ ಸೊಂಕಿತರಿಗೆ ಮೆಡಿಕಲ್ ಕಿಟ್ ವಿತರಣೆ

ಕೋವಿಡ್ ಸೊಂಕಿತರಿಗೆ ಮೆಡಿಕಲ್ ಕಿಟ್ ವಿತರಣೆ

ಹಗರಿಬೊಮ್ಮನಹಳ್ಳಿ 23: ತಾಲೂಕಿನ ಕಡಲಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋವಿಡ್ ಸೊಂಕಿತರಿಗೆ ಡಾನ್‌ಬಾಸ್ಕೋ ಸಂಸ್ಥೆ, ಹೊಸಪೇಟೆ ಹಾಗೂ ತಾಲೂಕು ಆಡಳಿತ ಪ್ರಾಥಮಿಕ ಆರೋಗ್ಯ ಕೇಂದ್ರ, ಬಿ.ಜಿ.ಹಳ್ಳಿ ವತಿಯಿಂದ ಮೆಡಿಕಲ್ ಕಿಟ್ ವಿತರಣೆ ಮಾಡಲಾಯಿತು. 

ಡಾನ್‌ಬಾಸ್ಕೋ ಸಂಸ್ಥೆಯ ನಿರ್ದೇಶಕರು ಫಾದರ್ ಆನಂದ್ ಸೊಂಕಿತರಿಗೆ ಮೆಡಿಕಲ್ ಕಿಟ್ ವಿತರಿಸಿ ಮಾತನಾಡಿ ಕೋವಿಡ್ ಸೊಂಕಿತರು ಮಾಸ್ಕ್‌ ಕಡ್ಡಾಯವಾಗಿ ಬಳಸಬೇಕು,ಹೋಂ ಕ್ವರೆಂಟೇನ್‌ನಲ್ಲಿದ್ದರೆ ಮುಂಜಾಗ್ರತಾ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಪಾಲಿಸಿ ಸೊಂಕನ್ನು ಹರಡದಂತೆ ಎಚ್ಚರವಹಿಸಬೇಕು, ಸೊಂಕಿತರು ಹೆದರದೆ ಆರೋಗ್ಯ ಇಲಾಖೆಯ ನಿದೇಶನದಂತೆ ಎಸ್‌ಎಂಎಸ್ ಪಾಲನೆ ಮಾಡುತ್ತಾ ಸಮಯಕ್ಕೆ ಸರಿಯಾಗಿ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಮಾತ್ರೆಗಳನ್ನು ಉಪಯೋಗಿಸಿದರೆ ಸೊಂಕಿನಿಂದ ಮುಕ್ತಿ ಪಡೆದು ಹರಡುವಿಕೆಗೂ ಬ್ರೇಕ್ ಹಾಕಬಹುದಾಗಿದೆ, ಡಾನ್‌ಬಾಸ್ಕೋ ಸಂಸ್ಥೆಯಿಂದ ಸೊಂಕಿತರಿಗೆ ಸಹಾಯವಾಗಲೆಂದು ಈ  ಸೇವೆ ಸಲ್ಲಿಸಲಾಗುತ್ತಿದೆ ಎಂದರು.ಆರೋಗ್ಯವೇ ಮಹಾ ಭಾಗ್ಯವಾಗಿದೆ ಒಟ್ಟು 80 ಕಿಟ್‌ಗಳನ್ನು ವಿತರಿಸಲಾಗಿದ್ದು, ಮುಂಬರುವ 3ನೇ ಅಲೆಯನ್ನು ತಡೆಗಟ್ಟಲು ಎಲ್ಲರೂ ಸಮರ್ಪವಾಗಿ ಕೈಜೋಡಿಸಬೇಕು, ಜ್ವರ, ಕೆಮ್ಮು, ನೆಗಡಿ ಕಂಡು ಬಂದಲ್ಲಿ ವೈದ್ಯರನ್ನು ಭೇಟಿ ಮಾಡಿ. ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಿ ಎಂದರು.  

ಈ ಸಂದರ್ಭಧಲ್ಲಿ ಉಪ ತಹಶೀಲ್ದಾರರು ಎಸ್‌.ಈಶ್ವರಯ್ಯ, ತಾಲೂಕು ವೈದ್ಯಾಧಿಕಾರಿಗಳು ಶಿವರಾಜ್, ಗ್ರಾ.ಪಂ. ಅಧ್ಯಕ್ಷರು ಸಿ.ಸುರೇಶ್, ಉಪಾಧ್ಯಕ್ಷೆ ಶಾಂಭವಿ, ಗ್ರಾ.ಪಂ. ಸರ್ವ ಸದಸ್ಯರು, ಕ್ರೀಮ್ ಯೋಜನೆ ಜಿಲ್ಲಾ ಸಂಯೋಜಕ ಶರಣಪ್ಪ, ತಾಲೂಕು ಸಂಯೋಜಕ ನಾಗರಾಜ ಬಾಣದ, ಬಿ.ಹೆಚ್‌.ಒ ಯಮುನಮ್ಮ ಉಪ್ಪಾರ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. 


ಸುದ್ದಿ ಓದಿ