ವಿಜಯಪುರ

ವಿಶೇಷ ಚೇತನ ಮಕ್ಕಳಿಂದ ಅರ್ಥಪೂರ್ಣ ರಕ್ಷಾ ಬಂಧನ ಆಚರಣೆ

ವಿಶೇಷ ಚೇತನ ಮಕ್ಕಳಿಂದ ಅರ್ಥಪೂರ್ಣ ರಕ್ಷಾ ಬಂಧನ ಆಚರಣೆ


ವಿಜಯಪುರ 29:  ವಿಜಯಲಕ್ಷ್ಮಿ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆಯಿಂದ ವಿಶೇಷ ಚೇತನ ಮಕ್ಕಳಿಗಾಗಿ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು ನೈಸರ್ಗಿಕ ವಸ್ತುಗಳಿಂದ ಸ್ವತಃ ರಾಖಿಗಳನ್ನು ತಯಾರಿಸಿ ಪರಸ್ಪರ ಕಟ್ಟಿಕೊಂಡರು. ಕಾರ್ಯಕ್ರಮದಲ್ಲಿ ಹೀರಾಚಂದ ಗಾಂಧಿ, ಆದರ್ಶಗೌಡ ಪಾಟೀಲ ಹಾಗೂ ಉದಯ ಯಾಳವಾರ ಮಕ್ಕಳನ್ನು ಪ್ರೋತ್ಸಾಹಿಸಿದರು. ಮಕ್ಕಳಿಗೆ ಹೊಸ ಉಡುಪುಗಳನ್ನು ವಿತರಿಸಲಾಯಿತು. ಪ್ರೀತಿ, ಸಹೋದರತ್ವ, ಕಾಳಜಿ ಹಾಗೂ ಪರಸ್ಪರ ರಕ್ಷಣೆಯ ಮಹತ್ವವನ್ನು ತಿಳಿಸಲಾಯಿತು. 


ಸುದ್ದಿ ಓದಿ