ವಿಜಯಪುರ

ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭಿಸಲಿ: ಅಂಗಡಿ ಕಳಕಳಿ

ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭಿಸಲಿ: ಅಂಗಡಿ ಕಳಕಳಿ

ದೇವರಹಿಪ್ಪರಗಿ 25: ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಭದ್ರಪಡಿಸುವುದು ಸಂಸ್ಥೆಯ  ಉದ್ದೇಶವಾಗಿದೆ ಎಂದು ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ್ ಅಂಗಡಿ ಹೇಳಿದರು.  

ಪಟ್ಟಣದ ವೆಂಕಟೇಶ್ವರ ಪ.ಪೂ ಕಾಲೇಜು, ಬಾಲಕ ಹಾಗೂ ಬಾಲಕಿಯರ ಪ್ರೌಢಶಾಲೆ ವತಿಯಿಂದ ಹೊಸ ವಿದ್ಯಾರ್ಥಿಗಳಿಗೆ ಶುಭ ಕೋರುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಗ್ರಾಮೀಣ ಪ್ರದೇಶದ ಮಕ್ಕಳು, ನಗರಗಳಿಗೆ ಸಮಾನವಾದ ಶಿಕ್ಷಣ ಪಡೆಯುವವರೆಗೆ ಅಭಿವೃದ್ಧಿ ಹೊಂದಿದ ದೇಶದ ಕನಸು ನನಸಾಗುವುದಿಲ್ಲ. ಮಕ್ಕಳಿಗೆ ಸಂಸ್ಥೆಯಲ್ಲಿ ಶೈಕ್ಷಣಿಕ ಶಿಕ್ಷಣ ಮಾತ್ರವಲ್ಲದೆ ಜೀವನ ಮೌಲ್ಯ, ಸಂಸ್ಕಾರ ಕಲಿಸಲಾಗುತ್ತದೆ.

ಶಿಕ್ಷಣದ ಜೊತೆಗೆ ವ್ಯಕ್ತಿತ್ವ ಅಭಿವೃದ್ಧಿ, ವೃತ್ತಿ ಮಾರ್ಗದರ್ಶನ, ಉದ್ಯೋಗ ಆಧಾರಿತ ಕೋರ್ಸ್‌ ಮೂಲಕ ಕೈಗಾರಿಕೆಗಳಲ್ಲಿ ಕೆಲಸ ನೀಡಲಾಗುವುದು. ಇದರಿಂದಾಗಿ ಅವರು ಸ್ವಾವಲಂಬಿಗಳಾಗಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಮಹಾಪುರುಷರ ಆದರ್ಶಗಳೇ ರ್ಸ್ಫೂದಾಯಕವಾಗಿವೆ. ಪ್ರತಿಯೊಬ್ಬರೂ ಜೀವನದಲ್ಲಿ ಗುರಿ ಮುಟ್ಟುವ ಉದ್ದೇಶದಿಂದ ಉತ್ತಮ ಕನಸುಗಳನ್ನು ಕಟ್ಟಿಕೊಂಡು ಸಾರ್ಥಕ ಬದುಕು ಸಾಗಿಸುವಂತಾಗಬೇಕು ಎಂದರು.  

ಹಲವಾರು ಗಣ್ಯರು ಮಾತನಾಡಿ, ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಭವಿಷ್ಯ ನಿರ್ಮಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು. ಮಕ್ಕಳಿಗೆ ಹೊಸ ಹೊಸ ತರಬೇತಿ ನೀಡುವ ಮೂಲಕ ಅವರ ಮೆದುಳು ಇನ್ನಷ್ಟು ಚುರುಕಾಗುಐವಂತೆ ಶಿಕ್ಷಕರು ಮಾಡಲಿ, ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಉತ್ತಮ ಸಂಸ್ಥೆಗಳು ಬೆಳೆಯಲಿ ಎಂದರು.  

ಕಾಲೇಜಿನ ಪ್ರಾಂಶುಪಾಲ ಎಸ್‌.ಡಿ.ರಜಪೂತ, ಪ್ರೌಢಶಾಲೆಯ ಮುಖ್ಯ ಗುರುಗಳಾದ ಎನ್ .ಎಲ್‌.ಅಂಗಡಿ, ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ಎಸ್‌.ಬಿ.ಬಿರಾದಾರ, ಹಿರಿಯ ಶಿಕ್ಷಕರಾದ ಎಸ್‌.ಎಸ್‌.ಸೊನ್ನದ, ಸೇರಿದಂತೆ ಅಂಗ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  


ಸುದ್ದಿ ಓದಿ