ಗಣಿತ-ವಿಜ್ಞಾನ ಶಾಸ್ತ್ರ ಸೂತ್ರದ ಪುಸ್ತಕ, ನೋಟ್ಬುಕ್
ಮುಂಡರಗಿ 07: ತಾಲೂಕಾ ಸಾರ್ವಜನಿಕ ಹೋರಾಟ ವೇದಿಕೆಯ 15ನೇ ವರ್ಷದ ವಾರ್ಷಿಕ ಮಹೋತ್ಸವದ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಶಾಲಾ ಮಕ್ಕಳಿಗಾಗಿ ಗಣಿತ/ವಿಜ್ಞಾನ ಸಂಕಿರಣ ಮುಂಡರಗಿ ಪುರಸಭೆ ಕಟ್ಟಡದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಪ್ರಶಸ್ತಿ ಪತ್ರಿಕೆ ಗಣಿತ/ವಿಜ್ಞಾನ ಶಾಸ್ತ್ರ ಸೂತ್ರದ ಪುಸ್ತಕಗಳು ನೋಟ್ಬುಕ್ ಪೆನ್ನುಗಳನ್ನು ವಿತರಿಸಲಾಯಿತು.
ಪಟ್ಟಣದಲ್ಲಿ ತಾಲೂಕಾ ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ಒಟ್ಟು 70 ವಿದ್ಯಾರ್ಥಿ/ವಿದ್ಯಾರ್ಥಿನಿಯರುರಾಜ್ಯ ಮಟ್ಟದ ಶಾಲಾ ಮಕ್ಕಳಿಗಾಗಿ ಗಣಿತ/ವಿಜ್ಞಾನ ಶಾಸ್ತ್ರದ ವಿಚಾರಣ ಸಂಕಿರಣ ಪಾಲ್ಗೊಂಡುಗಣಿತ/ವಿಜ್ಞಾನ ಶಾಸ್ತ್ರಉಪನ್ಯಾಸವನ್ನು ಪಡೆದುಒಟ್ಟು 12 ವಿಭಾಗ ಶಾಲೆಗಳ ಮಕ್ಕಳಿಗೆ ವೇದಿಕೆಯ 15ನೇ ವಾರ್ಷಿಕದ ಮಹೋತ್ಸವದ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪತ್ರಕೆಗಣಿತ/ವಿಜ್ಞಾನ ಶಾಸ್ತ್ರದ ಸೂತ್ರದ ಪುಸ್ತಕಗಳು, ನೋಟಪುಸ್ತಕ, ಪೆನ್ನು ವಿತರಣೆಯನ್ನು ಮಕ್ಕಳಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯಮನಪ್ಪ ಭಜಂತ್ರಿ, ಚಂದ್ರಹಾಸ ದೊಡ್ಡಮನಿ, ಸುರೇಶ ಕುಂಭಾರ, ಮೈನುದ್ದಿನ ಗರಡಿಮನಿ, ಬಸಪ್ಪ ವಡ್ಡರ, ಎನ್.ಎನ್.ಕಲಕೇರಿ, ವಾಯ್.ಹೆಚ್.ಬಚ್ಚನಹಳ್ಳಿ ಶಿಕ್ಷಕರು ಇತರೆ ಎಲ್ಲಾ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು/ವಿದ್ಯಾರ್ಥಿಇನಿಯರು ಪಾಲ್ಗೊಂಡಿದ್ದರು.