ಬಳ್ಳಾರಿ

ಗಣಿತ, ವ್ಯಕ್ತಿತ್ವ ವಿಕಸನ ತರಬೇತಿ

ಗಣಿತ, ವ್ಯಕ್ತಿತ್ವ ವಿಕಸನ ತರಬೇತಿ

ಬಳ್ಳಾರಿ 31: ಎಂದೆಂದೂ ಕಂಡರಿಯದ ಅಪರೂಪದ ಪ್ರತಿಭೆ , ಆಧುನಿಕ ಗಣಿತ ಮಾಂತ್ರಿಕ ಎಂದೇ ಹೆಸರುವಾಸಿಯಾದ ಬಸವರಾಜ ಉಮ್ರಾಣಿ ಅವರು ಸರ್ಕಾರಿ ಆದರ್ಶ ವಿದ್ಯಾಲಯ ಬಳ್ಳಾರಿ ಶಾಲೆಯಲ್ಲಿ ಗಣಿತದ ಬಗ್ಗೆ ಹಾಗೂ ವ್ಯಕ್ತಿತ್ವ ವಿಕಸನ  ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಈ ತರಬೇತಿ ಕಾರ್ಯಕ್ರಮವನ್ನು ವೀಕ್ಷಿಸಿದ ಮಕ್ಕಳು ಬಹಳ ಸಂತೋಷಪಟ್ಟರು. ಅವರೊಂದಿಗೆ ಸೆಲ್ಫೀ ಪೋಟೋಗಳು ತೆಗೆದುಕೊಂಡರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಂಜನೇಯ ಕೆ.ಜಿ. ಮುಖ್ಯ ಗುರುಗಳು ಸರ್ಕಾರಿ ಆದರ್ಶ ವಿದ್ಯಾಲಯ ಬಳ್ಳಾರಿ ವಹಿಸಿದ್ದರು. ಈಸಂಧರ್ಭದಲ್ಲಿ ಶಿಕ್ಷಕರು, ಸಿಬ್ಬಂದಿ ವರ್ಗದವರು ಮತ್ತು 380 ಮಕ್ಕಳು ಭಾಗವಹಿಸಿದ್ದರು.

ಸುದ್ದಿ ಓದಿ