ವಿಕ್ ಎಂಡ್ ಲಾಕ್‌ಡೌನ್, ಹಗರಿಬೊಮ್ಮನಹಳ್ಳಿಯಲ್ಲಿ ಭಾರಿ ಬೆಂಬಲ
ಹಗರಿಬೊಮ್ಮನಹಳ್ಳಿ 24: ಕೋವಿಡ್ 2ನೇ ಅಲೆಯ ಸೊಂಕನ್ನು ತಡೆಗಟ್ಟಲು ರಾಜ್ಯ ಸರಕಾರ ವಿಧಿಸಿದ ವಿಕ್ ಎಂಡ್ ಲಾಕ್‌ಡೌನ್‌ಗೆ ಹಗರಿಬೊಮ್ಮನಹಳ್ಳಿಯಲ್ಲಿ ಭಾರಿ ಬೆಂಬಲ ದೊರೆತಿದ್ದು ಶನಿವಾರ ಬೆಳಗಿನಿಂದಲೆ ಭಾಗಶಃ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಲಾಕ್ಡೌನ್‌ಗೆ ಕೈ ಜೋಡಿಸಿದ್ದು ಕಂಡುಬಂದಿತು.
ತರಕಾರಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಅಧಿಕಾರಿ ವರ್ಗ : ಪ್ರತಿ ದಿನ ಬೆಳಗ್ಗೆ ಭಾರಿ ಜನ ಜಂಗುಳಿಯಿಂದ ನಡೆಯುವ ತರಕಾರಿ ಮಾರುಕಟ್ಟೆಯನ್ನು ಹಳೇ ಬಸ್ ನಿಲ್ದಾಣದಿಂದ ಗಂಭೀ ಕಾಲೇಜು ಗ್ರೌಂಡ್‌ಗೆ ಶಿಫ್ಟ್ ಮಾಡಿಸಿ, 6ಗಂಟೆಯಿಂದ ತಾಲೂಕಾಡಳಿತವು ಕಾಲೇಜು ಗ್ರೌಂಡ್‌ನಲ್ಲಿಯೇ ಬೀಡು ಬಿಟ್ಟು ಮಾಸ್ಕ್,ಸಮಾಜಿಕ ಅಂತರ ಕಾಪಾಡಿಕೊಂಡು ಕರೀದಿಯಲ್ಲಿ ತೊಡಗಲು ತಿಳಿಸಿದರು.
ಅಂಗಡಿಯಿಂದ ಅಂಗಡಿಗೆ ಅಂತರ : ತರಕಾರಿ ಮಾರುಕಟ್ಟೆಯಲ್ಲಿ ಕಿಕ್ಕಿರಿದ ಜನ ಸೇರದಂತೆ ಅಂಗಡಿಯಿಂದ ಅಂಗಡಿಗೆ ಸುಮಾರು 6ರಿಂದ8ಅಡಿಗಳಷ್ಟು ಅಂತರವಿರಿಸಿ ವ್ಯಾಪಾರ ವಹಿವಾಟು ನಡೆಸುವಂತೆ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಿದರು.
ಪೋಲೀಸ್ ಸಿಬ್ಬಂದಿಯಿಂದ ಉತ್ತಮ ಕಾರ್ಯಾಚರಣೆ : ಅನಗತ್ಯವಾಗಿ ಒಡಾಟ ನಡೆಸುತ್ತಿರುವವರಿಗೆ ಕರೊನಾ ವೈರಸ್ ಬಗ್ಗೆ ಅರಿವು ಮೂಡಿಸಿ ಲಾಕ್‌ಡೌನ್ ಯಾರಿಗಾಗಿ ಎಂಬ ಅರಿವು ಮೂಡಿಸಿ ಸಾರ್ವಜನಿಕರ ಅನಗತ್ಯ ಒಡಾಟ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದರೆ,ಇನ್ನು ಕೆಲ ವೃತ್ತಗಳಲ್ಲಿ ವಾಹನ ಸವಾರರಿಗೆ ದಂಡ ವಿಧಿಸುವ ಕಾರ್ಯವು ನಡೆಯಿತು.
ಇಂದು 24 ಪ್ರಕರಣ : ಇಂದು ತಾಲೂಕಾಸ್ಪತ್ರೆಯಲ್ಲಿ ಒಟ್ಟು 24 ಕರೋನಾ ಪ್ರಕರಣ ಪತ್ತೆಯಾಗಿದ್ದು,ಇದರಲ್ಲಿ 18ರಾ್ಯಪಿಡ್,6ಆರ್‌ಟಿಪಿಸಿಆರ್ ನಲ್ಲಿ ತಿಳಿದುಬಂದಿದೆ.ಇನ್ನು ಆಸ್ಪತ್ರೆಯಲ್ಲಿ 11ಕೇಸ್ ಅ್ಯಕ್ಟೀವ್ ಅಗಿದ್ದು ಅದರಲ್ಲಿ 3ಐಸಿಯು ವಾರ್ಡ್‌ನಲ್ಲಿದ್ದರೆ ಉಳಿದ 8ರೋಗಿಗಳಿಗೆ ನಾರ್ಮಲ್ ಟ್ರೀಟ್‌ಮೆಂಟ್ ನಡೆಯುತ್ತಿದೆ, ತಾಲೂಕಿನಾಧ್ಯಾಂತ ಒಟ್ಟು 210ಕೇಸ್‌ಗಳಲ್ಲಿ 67ರೋಗಿಗಳು ಡಿಸ್ಚಾರ್ಜ ಅಗಿದ್ದು 3 ರೋಗಿಗಳು ಸಾವನ್ನಪ್ಪಿರು ಮಾಹಿತಿಯನ್ನು ತಾಲೂಕು ವೈಧ್ಯಾಧಿಕಾರಿ ಶಿವರಾಜ್ ಪತ್ರಿಕೆಗೆ ತಿಳಿಸಿದ್ದಾರೆ.
ಸ್ವಯಂ ಪ್ರೇರಿತವಾಗಿ ಭಾಗಿ : ಪಟ್ಟಣದ ಯುವ ಶಕ್ತಿ ವೇದಿಕೆಯ ಸಂಚಿ ಶಿವಕುಮಾರ ತಮ್ಮ ಒಮಿನಿ ವಾಹನಕ್ಕೆ ಧ್ವನಿವರ್ಧಕ ಬಳಸಿ ಕರೋನಾ ಜಾಗೃತಿ ಗೀತೆಗಳ ಮೂಲಕ ಅರಿವು ಮೂಡಿಸಿದ್ದು,ತರಕಾರಿ ಮಾರುಕಟ್ಟೆ,ಬಸವೇಶ್ವರ ಬಜಾರ್ ಸೇರಿದಂತೆ ಪಟ್ಟಣದ ಅನೇಕ ಕಡೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಎಚ್ಚರಿಕೆ ಗೀತೆ ಮೊಳಗಿಸಿದರು.
ಅಂಗಡಿ ಮುಂಗಟ್ಟುಗಳು ಸಂಪೂರ್ಣ ಸ್ತಬ್ಥ : ಪಟ್ಟಣದ ಬಸವೇಶ್ವರ ಬಜಾರ್ ಸೇರಿದಂತೆ ಕೂಡ್ಲಗಿ ವೃತ್ತ,ಕೊಟ್ಟೂರು ವೃತ್ತ ಹಾಗೂ ಪಟ್ಟಣದೆಲ್ಲೆಡೆ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಅಗಿದ್ದು ವಿಕ್ ಎಂಡ್ ಲಾಕ್ ಡೌನ್‌ಗೆ ಕೈಜೋಡಿಸಿರುವುದು ಕಂಡುಬಂದಿತು.ಇನ್ನು ಬೆರಳೆಣಿಕೆಯಷ್ಟು ಅಗತ್ಯ ಸೇವೆಗಳ ಅಂಗಡಿಗಳು ತೆರೆದಿದ್ದವು.