ತೈಲ ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ
ಬಳ್ಳಾರಿ 14: ನಗರದ ಉದ್ಯೋಗ್ ಪೆಟ್ರೋಲ್ ಬಂಕ್ ವೃತ್ತದಲ್ಲಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರಕಾರಗಳು ಅವೈಜ್ಞಾನಿಕ ತೈಲ ಬೇಲೆ ಏರಿಕೆ ಮೂಲಕ ಪೆಟ್ರೋಲ್ ಲೀಟರ್ಗೆ 100 ರೂಪಾಯಿ ಏರಿಕೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ನಂತರ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿರವರು ಕೇಂದ್ರ ಸರ್ಕಾರದ ಅವೈಜ್ಞಾನಿಕ ತೈಲ ಬೇಲೆ ಏರಿಕೆ ಖಂಡಿಸಿ ನೆಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಚ್ಚೇದಿನ ನೆಪದಲ್ಲಿ ಹಾಗೂ ಕಪ್ಪು ಹಣ ತರುತ್ತೇವೆಂದು ಸುಳ್ಳು ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ಇಲ್ಲಿಯವರೆಗೆ ನಿರುದ್ಯೋಗ ಹಾಗೂ ಬಡತನ ನಿವಾರಣೆಗೆ ಸೂಕ್ತ ಕ್ರಮ ಕೈ ಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದು ಜೊತೆಗೆ ಸಾಮಾನ್ಯ ವರ್ಗದ ಬಡವರ ಮೂಲಭೂತ ಅವಶ್ಯಕತೆಗಳಾದ ಗ್ಯಾಸ್ ಸಿಲೆಂಡರ್, ಪೆಟ್ರೋಲ್, ಡೀಸೆಲ್ ಆಹಾರ ಧಾನ್ಯದ ದರಗಳನ್ನು ಗಗನಕ್ಕೇರಿಸಿ ಭಾರತದದ್ಯಂತ ಜನಾಕ್ರೋಶಕ್ಕೆ ಕಾರಣರಾಗಿದ್ದಾರೆ. ರಾಮರಾಜ್ಯ ಮಾಡುತ್ತೇವೆಂದು ಬಂದವರು ನೆರೆಯ ರಾಷ್ಟ್ರಗಳಾದ ಶ್ರೀಲಂಕಾ , ಪಾಕಿಸ್ತಾನ, ಮಯನ್ಮಾರ್, ಬಾಂಗ್ಲಾದೇಶ್, ನೇಪಾಳ್ ಅಫಗಾನಿಸ್ತಾನ್ ಮುಂತಾದ ಬಡ ರಾಷ್ಟ್ರಗಳಿಗಿಂತಲೂ ಎರಡರಷ್ಟು ಹೆಚ್ಚು ಮಾಡಿದ್ದಾರೆ. ದೇಶದ ಜಿ.ಡಿ.ಪಿ ಕಾಂಗ್ರೆಸ್ ಸರಕಾರದಲ್ಲಿ 9 ರಷ್ಟು ಇತ್ತು. ಆದರೆ ಈ ಬಿಜೆಪಿ ಸರಕಾರ ಬಂದ 06 ವರ್ಷದಲ್ಲಿ ಮೈನಸ್ 7 ಪಾಯಿಂಟ್ ಗೆ ಬಂದಿದೆ.
ಕೊರೊನಾ ಸಂಕಷ್ಟದ ಸಮಯದಲ್ಲೂ ಭಷ್ಟಾಚಾರದ ಮೂಲಕ ದೇಶದ ಜನರನ್ನು ಲೂಟಿ ಮಾಡುತ್ತಿದ್ದಾರೆ. ಕೊರೊನಾ ರೋಗದ ಲಸಿಕೆಗಾಗಿ ಮೀಸಲಿಟ್ಟಿದ್ದ 35 ಸಾವಿರ ಕೋಟಿ ಲೆಕ್ಕ ನೀಡುತ್ತಿಲ್ಲ, ಪ್ರದಾನ ಮಂತ್ರಿ ಕೇರ್ ಫಂಡ್ ಗೆ ಬಂದ ಸಾವಿರಾರು ಕೋಟಿ ಲೆಕ್ಕ ನೀಡುತ್ತಿಲ್ಲ, ದೇಶದಾದ್ಯಂತ 3 ಲಕ್ಷ ಜನ ಸಾಯುತ್ತಿದ್ದರೂ ಸರಿಯಾದ ಆಕ್ಸಿಜನ್, ವೆಂಟಿಲೇಟರ್ಗಳು, ವೈದ್ಯಕೀಯ ಉಪಕರಣಗಳು ಒದಗಿಸದೇ ಜನರ ಪ್ರಾಣ ಕಾಪಾಡುವಲ್ಲಿ ವಿಪಲರಾಗಿದ್ದಾರೆ.
ಕೊನೆಯಲ್ಲಿ ಈ ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ತತ್ ಕ್ಷಣವೇ ಪೆಟ್ರೋಲ್ ಡೀಸೆಲ್, ಗ್ಯಾಸ್ ಸಿಲೆಂಡರ ಗಳ ಬೆಲೆಗಳನ್ನು ಕಡಿಮೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರತದಾದ್ಯಂತ ಉಗ್ರವಾದ ಹೋರಾಟವನ್ನು ಹಮ್ಮಿಕೊಂಡು ತಕ್ಕ ಪಾಠ ಕಲಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಿಕ್ ಓಟ್ ಮಾಡುತ್ತೇವೆಂದು ಕಿಡಿ ಕಾರಿದರು.
ಈ ಕೇಂದ್ರ ಸರ್ಕಾರದ ಹಲವಾರು ವೈಫಲ್ಯಗಳನ್ನು ಖಂಡಿಸಿ ನೆಡೆದ ಪ್ರತಿಭಟನೆ ಬೆಂಬಲಿಸಿ ಭಾಗವಹಿಸಿದಂತಹ ಪಕ್ಷದ ಮುಖಂಡರಿಗಳಿಗೂ, ಕಾರ್ಯಕರ್ತರಿಗೂ, ಪದಾಧಿಕಾರಿಗಳಿಗೂ ಹಾಗು ಸಹಕಾರ ನೀಡಿದ ಪೋಲೀಸ್ ಇಲಾಖೆಯವರಿಗೂ ಪತ್ರಿಕಾ ಮಾಧ್ಯಮದವರಿಗೂ ಅಭಿನಂದನೆಗಳನ್ನು ತಿಳಿಸಿದರು.
ಪ್ರತಿಭಟನೆಯಲ್ಲಿ ಕಮಲಾಪುರ ಬ್ಲಾಕ್ ಕಾಂಗ್ರೆಸ ಸಮಿತಿ ಅಧ್ಯಕ್ಷರಾದ ವಿ ಸೋಮಪ್ಪ ಗುಜ್ಜಲ ನಾಗರಾಜ, ಗುಜ್ಜಲ್ ರಘು, ತೇಜಪ್ಪ, ವೆಂಕಟರಮಣ, ಹಾನಗಲ್ ವೆಂಕೋಬಣ ರಾಮನಗೌಡ, ಚಿದಾನಂದಪ್ಪ, ರವೂಫ್, ನಿಂಬಗಲ್ ರಾಮಕೃಷ್ಣ, ಯಂಕಪ್ಪ, ಗೌಸ್ ವಿನಯ್ ಶೆಟ್ಟರ, ರಫೀಕ್, ಭರತ್, ಆಯೆಷಾ, ವೆಂಕಟಲಕ್ಷ್ಮಿ, ಬಾಷಾ, ಬುಡೆನ್, ಬಸವನ ಗೌಡ ಮೇಟಿ, ತಿಮ್ಮಪ್ಪ ಯಾದವ್, ಅಬುಲ್ ಕಲಾಮ, ದಾದಾಪೀರ್ ವಿಜಯ್ ಕುಮಾರ್, ಶ್ರೀನಿವಾಸ್, ಲಿಯಾಕತ್, ್ಣ ತಾಜುದ್ದೀನ್, ಅಲಿಂ ಬಾಷ, ನಾಗರಾಜ್, ಹಾಗು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಪದಾಧಿಕಾರಿಗಳು ಕಾರ್ಯಕರ್ತರು ಬಾಗವಹಿಸಿದ್ದರು.