ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ: ಶಾಸಕ ಬಿಮಾನಾಯ್ಕ್
ಹಗರಿಬೊಮ್ಮನಹಳ್ಳಿ.ನ.20 : ಬಡ ಕುಟುಂಬಗಳು ಜೀವನ ನಿರ್ವಹಣೆಯ ಸವಾಲು ಎದುರಿಸಿ ಆರ್ಥಿಕವಾಗಿ ಸಬಲರಾಗುವು ಕನಸು ನನಸು ಮಾಡಿಕೊಳ್ಳಲು ಹತ್ತಾರು ಸವಾಲುಗಳನ್ನು ಎದುರಿಸುತ್ತಾರೆ ಇಂತಹ ಸಮಯದಲ್ಲಿ ದುಂದು ವೆಚ್ಚಕ್ಕೆ ದಾಸರಾಗಿ ವಿವಾಹ ಮಾಡಿ ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸುವಲ್ಲಿ ಸಾಮೂಹಿಕ ವಿವಾಹಗಳು ಬಡ ಕುಟುಂಬಗಳಿಗೆ ವರದಾನವಾಗಿವೆ ಎಂದು ಶಾಸಕ ಎಸ್.ಭೀಮಾನಾಯ್ಕ್ ಹೇಳಿದರು.
ತಾಲೂಕಿನ ಲಡಕನಬಾವಿ ಗ್ರಾಮದ ಶ್ರೀ ಪಾಂಡುರಂಗ ರುಕ್ಮಿಣಿ ಮತ್ತು ಶ್ರೀ ಕನ್ನಿಕಾಪರಮೇಶ್ವರಿ ದೇವರುಗಳ ಸಮ್ಮುಖದಲ್ಲಿ ದೊಂಡಿ ಮಹೋತ್ಸವ ಹಾಗೂ 9ನೇ ವರ್ಷದ ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರು ಸಮಾಜದಲ್ಲಿ ತಮ್ಮ ಪ್ರತಿಷ್ಟತೆ ಮೆರೆಸಲು ಆಡಂಬರ ಪ್ರದರ್ಶಿಸುತ್ತಾ ಆದ್ದೂರಿ ವಿವಾಹ ಮಾಡಿಕೊಂಡು ಸಾಲದ ಸುಳಿಗೆ ಸಿಲುಕಿ ಪರಿತಪ್ಪಿಸುತ್ತಿದ್ದು, ಇದು ಕೊನೆಯಾಗಬೇಕು. ಸರಳ ಸಾಮೂಹಿಕ ವಿವಾಹಗಳನ್ನು ಮಾಡಿಕೊಳ್ಳುವ ಮೂಲಕ ಬದುಕನ್ನು ಸುಂದರಗೊಳಿಸಬೇಕು. ಹೆಣ್ಣೆತ್ತವರ ಹೊಟ್ಟೆಯನ್ನು ತಣ್ಣಗೆ ಮಾಡುವ ಕಾರ್ಯವನ್ನು ನಾರಾಯಣದೇವರಕೆರೆಯ ದೈವಸ್ಥರು ಹತ್ತು ವರ್ಷಗಳಿಂದ ಈ ಕಾರ್ಯಕ್ರಮ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ. ಬದುಕಿನಲ್ಲಿ ಸಮಸ್ಯೆಗಳು ಎದುರಾದಾಗ ತಾಳ್ಮೆ ಹೊಂದಾಣಿಕೆಯಿಂದ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು ವರದಕ್ಷಿಣಿಯಂತಹ ಸಮಸ್ಯೆ ಇನ್ನೂ ಜೀವಂತವಾಗಿವೆ ಸಾಮೂಹಿಕ ವಿವಾಹಗಳಿಂದ ಬಡವರು ಮತ್ತು ಮದ್ಯಮ ವರ್ಗದವರು ಸ್ವಲ್ಪ ಮಟ್ಟಿಗಾದರೂ ನೆಮ್ಮದಿ ಪಡೆಯುವಂತಾಗಿದೆ ಎಂದರು.
ಸಾಮೂಹಿಕ ವಿವಾಹದಲ್ಲಿ 12 ನವ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಕುರಿ ಶಿವಮೂರ್ತಿ, ಎನ್.ಕೃಷ್ಣಮೂರ್ತಿ, ಹನುಮಂತಪ್ಪ ತಳವಾರ, ಡಾಽಽ ತಿಪ್ಪೇಸ್ವಾಮಿ ವೆಂಕಟೇಶ, ಕೆ.ಬಿ.ಸತೀಶ, ಚಿಂತ್ರಪಳ್ಳಿ ದೇವೇಂದ್ರ್ಪ, ಡಿಶ್ ಮಂಜುನಾಥ, ರೋಗಾಣಿ ಹುಲುಗಪ್ಪ, ಯಮುನಪ್ಪ, ರವಿ, ನಾಗಪ್ಪ, ಶೇಖರ, ಬಂಗಾರಿ ನಾಗರಾಜ, ರಾಮಕೃಷ್ಣ, ಚಿಗರಿ ಹುಲುಗಪ್ಪ, ಹುಗ್ಗಿ ನಾಗಪ್ಪ, ಕುರುಬರ ಹುಲುಗಪ್ಪ, ಕುದುರಿ ಪಂಪಾಪತಿ, ಗುಂಡೂರು ಬಸವರಾಜ, ರೋಗಾಣಿ ಪ್ರಕಾಶ ಹಾಗೂ ಇತರರು ಇದ್ದರು.