ಹಗರಿಬೊಮ್ಮನಹಳ್ಳಿ

ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ: ಶಾಸಕ ಭೀಮಾನಾಯ್ಕ್‌

ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ: ಶಾಸಕ ಭೀಮಾನಾಯ್ಕ್‌

ಹಗರಿಬೊಮ್ಮನಹಳ್ಳಿ 09: ಪ್ರಸ್ತುತ ದುಬಾರಿ ದುನಿಯಾದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ದುಂದು ವೆಚ್ಚಕ್ಕೆ ಕಡಿವಾಣಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಾಸಕ ಎಸ್‌.ಭಿಮಾನಾಯ್ಕ್‌ ಹೇಳಿದರು. 

ತಾಲೂಕಿನ ಕಡಲಾಬಾಳು ಗ್ರಾಮದಲ್ಲಿ  ಗವಿಮಠದ ದಿವ್ಯ ಪರಂಪರೆಯ 15ನೇ ಪೀಠಾಧಿಪತಿ ಮ.ನಿ.ಪ್ರ.ಜ ಲಿಂ ಶಿವಶಾಂತವೀರ ಮಹಾಸ್ವಾಮಿಗಳ 100ನೇ ವರ್ಷದ ಪುಣ್ಯಾರಾಧನೆ ಪ್ರಯುಕ್ತ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸತತ 10ವರ್ಷಗಳಿಮದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ, ಇಡೀ ರಾಜ್ಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ಕಾಣಬಹುದಾಗಿತ್ತು ಇಂದು ಈ ಭಾಗದ ಅನೇಕ ಮಠಗಳು ಸಾಮೂಹಿಕ ವಿವಾಹ ಕಾಣುತ್ತಿದ್ದೇವೆ ವಿಶೇಷವಾಗಿ ಕೊಪ್ಪಳದ ಗವಿಸಿದ್ದೇಶ್ವರಮಠ, ಕೊಟ್ಟೂರು ಮಠ ಸೇರಿದಂತೆ ನಮ್ಮ ಬಾಗದ ಮಠಾಧೀಶರು ಈ ಸತ್ಕಾರ್ಯದಲ್ಲಿ ತೊಡಗಿರುವುದು ನಿಜಕ್ಕೂ ಹರ್ಷವೆನಿಸಿದೆ. ಬ್ಯಾಲಾಳು ಗ್ರಾಮದ ಕೆರೆಗೆ ಸೋಮವಾರ ನೀರು ಹರಿಸಲು ಮಾಲವಿ ಜಲಾಶಯದ ಎಡದಂಡೆ ಕಾಲುವೆಯನ್ನು ಸ್ವಚ್ಛಗೊಳಿಸಲಾಗುತ್ತಿದೆ, ಸುಮಾರು 2ಟಿಎಂಸಿ ನೀರು ಹಳ್ಳಕ್ಕೆ ಹರಿಸಲಾಗಿದೆ, ಕ್ಷೇತ್ರದಲ್ಲಿ ಚಿಲವಾರಬಂಡಿ ಏತನೀರಾವರಿ ಹಾಗೂ ಮಾಲವಿ ಜಲಾಶಯದ ಬೃಹತ್ ನೀರಾವರಿ ಯೋಜನೆಗಳಿಂದ ಕಡಲಾಬಾಳು ಗ್ರಾಮಕ್ಕೆ ಎಥೆಚ್ಚವಾಗಿ ರ‌್ಥರರಿಗೆ ಸಹಾಯವಾಗಲಿದೆ ಎಂದರು. 

ಸಮಾಜ ಸೇವಕ ಕುರಿ ಶಿವಮೂರ್ತಿ ಮಾತನಾಡಿದರು, ಕಾರ್ಯಕ್ರಮದ ಸಾನಿಧ್ಯವನ್ನು ಹೂವಿನ ಹಡಗಲಿಯ ಶಾಖಾ ಗವಿಮಠದ ಡಾ. ಹಿರಿಶಾಂತವೀರ ಮಹಾ ಸ್ವಾಮಿಗಳು, ಹಾಲಸ್ವಾಮಿ ಮಠದ ಅಭಿವನ ಹಾಲಸಿದ್ದೇಶ್ವರ ಸ್ವಾಮಿಗಳು, ಗೆದ್ದಿಕೇರೆ ಮಠದ ಅಭಿನವ ಚರಂತೇಶ್ವರ ಸ್ವಾಮಿಗಳು ವಹಿಸಿದ್ದರು. ಈ ಸಂಧರ್ಭದಲ್ಲಿ ಕಡಲಾಬಾಳು ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಮ್ಮ ನಾಗರಾಜ, ಮುಖಂಡರಾದ ಹೆಗ್ಡಾಳ್ ರಾಮಣ್ಣ, ಜಿಲ್ಲಾ ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ್, ಹುಡೇದ್ ಗುರುಬಸವರಾಜ, ಪವಾಡಿ ಹನುಮಂತಪ್ಪ,ಸ್ನೇಹ ಡೆವಲಪರ್ಸನ ಸುರೇಶ್,  ಗುತ್ತಿಗೆದಾರ ಉಮಾಪತಿ ಬ್ಯಾಟಿ ನಾಗರಾಜ ಸೇರಿದಂತೆ ಇನ್ನಿತರರು ಇದ್ದರು. ಶಿಕ್ಷಕ ಮೋಹನ್ ಅಣಜಿ ಸ್ವಾಗತಿಸಿದರು. 13 ನವ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು. 


ಸುದ್ದಿ ಓದಿ