ಮುಂಡರಗಿ

ಡಿ.19ರಂದು ಸಾಮೂಹಿಕ ವಿವಾಹ ಸಮಾರಂಭ

ಡಿ.19ರಂದು ಸಾಮೂಹಿಕ ವಿವಾಹ ಸಮಾರಂಭ

ಮುಂಡರಗಿ 30:  ಪುನೀತ ರಾಜಕುಮಾರ ಅವರ ಸ್ಮರಣಾರ್ಥ ಕಿಸಾನ್ ಜಾಗೃತಿ ವಿಕಾಸ ಸಂಘವು ಡಿ.19ರಂದು ಪಟ್ಟಣದ ಜಗದ್ಗುರು ಅನ್ನದಾನೀಶ್ವರ ತಾಲ್ಲೂಕು ಕ್ರೀಡಾಂಗಣದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಹಮ್ಮಿಕೊಂಡಿದೆ ಎಂದು ಕಿಸಾನ್ ಜಾಗೃತಿ ವಿಕಾಸ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ವಿಶ್ವನಾಥ ತಾಂಬ್ರಗುಂಡಿ ತಿಳಿಸಿದರು. 

ಕಿಸಾನ್ ಜಾಗೃತಿ ವಿಕಾಸ ಸಂಘವು ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಶಿರಹಟ್ಟಿಯ ಫಕ್ಕೀರಸಿದ್ಧರಾಮೇಶ್ವರ ಸ್ವಾಮಿಜಿ, ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ, ಡಾ.ರುದ್ರಮುನಿ ಶಿವಾಚಾರ್ಯ ಸ್ವಾಮಿಜಿ, ಖಾದರಲಿಂಗ ಶರಣರು, ಪಲ್ಲಕ್ಕಿ ನಾರಾಯಣಸ್ವಾಮಿ ಹಾಗೂ ಮತ್ತಿತರ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 

 ಕಿಸಾನ್ ಜಾಗೃತಿ ವಿಕಾಸ ಸಂಘದ ರಾಷ್ಟ್ರೀಯ ಅಧ್ಯಕ್ಷ ಪಿ.ಯುಗಂಧರ್ ನಾಯ್ಡು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಸಚಿವರಾದ ಪ್ರಹ್ಲಾದ ಜೋಶಿ, ಬಿ.ಶ್ರೀರಾಮುಲು, ಬಿ.ಸಿ.ಪಾಟೀಲ, ಸಿ.ಸಿ.ಪಾಟೀಲ, ಆನಂದ ಸಿಂಗ, ಹಾಲಪ್ಪ ಆಚಾರ್ಯ, ಗೋವಿಂದ ಕಾರಜೋಳ, ಅರುಣಕುಮಾರ ಸಿಂಗ್, ಬಿ.ಎಲ್‌.ಸಂತೋಷ, ಜಿ.ಪರಮೇಶ್ವರ, ಎಚ್‌.ಕೆ.ಪಾಟೀಲ, ಚಿತ್ರ ನಟರಾದ ಡಾ.ಶಿವರಾಜಕುಮಾರ, ದರ್ಶನ, ಚಿಕ್ಕಣ್ಣ, ರಚಿತಾರಾಮ್, ಜಯಪ್ರಕಾಶ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 

 ಶಾಮಿಯಾನ, ಊಟ, ಆಸನ, ವಿದ್ಯುತ್ ಹಾಗೂ ಮತ್ತಿತರ ಅಗತ್ಯ ವ್ಯವಸ್ಥೆಗಳನ್ನು ಈಗಾಗಲೆ ಮಾಡಿಕೊಳ್ಳಲಾಗಿದೆ. ಸುಮಾರು 50ಕ್ಕೂ ಹೆಚ್ಚು ಬಾಣಸಿಗರು ಅಡುಗೆ ತಯಾರಿಸಲಿದ್ದು, ಪಟ್ಟಣದ ಶಾಲಾ ಕಾಲೇಜುಗಳ ಎನ್‌.ಸಿ.ಸಿ., ಎನ್‌.ಎಸ್‌.ಎಸ್‌. ಸ್ಕೌಟ್ಸ ಸೇರಿದಂತೆ ಸಾವಿರಾರು ಕಾರ್ಯಕರ್ತರು ಸೇವೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. 

  ಜಿಲ್ಲಾ ಘಟಕದ ಅಧ್ಯಕ್ಷ ದ್ರುವಕುಮಾರ ಹೂಗಾರ, ಬಸವರಾಜ ನವಲಗುಂದ, ತಾಲ್ಲೂಕು ಅಧ್ಯಕ್ಷ ಗಣೇಶ ಭರಮಕ್ಕನವರ, ಜಗದೀಶ ಪಾಟೀಲ, ಮೃತ್ಯುಂಜಯ ಹಿರೇಮಠ, ಶಿವರಾಜ ಅಸುಂಡಿ ಇದ್ದರು. 


ಸುದ್ದಿ ಓದಿ