ನಾಗರಿಕ ಸೌಲಭ್ಯಗಳಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಬಳ್ಳಾರಿ 14: ಇಂದು SUಅI (ಅ) ಪಕ್ಷ ಹಾಗೂ ಮುಸ್ತಫಾ ನಗರ ನಾಗರೀಕ ಹೋರಾಟ ಸಮಿತಿ ವತಿಯಿಂದ ನಗರದ ಆಂಧ್ರಾಳ್ ರಸ್ತೆಯಲ್ಲಿರುವ ಹರಿಚಂದ್ರ ಘಾಟ್ ಬದಿಯಲ್ಲಿರುವ ಪ್ರದೇಶಕ್ಕೆ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಹಾಗೂ ರಸ್ತೆ ತಡೆ ಹೋರಾಟವನ್ನು ಮಾಡಲಾಯಿತು.
ಬಳ್ಳಾರಿ ನಗರದ ಆಂಧ್ರಾಳ್ ರಸ್ತೆಯಲ್ಲಿರುವ ಹರಿಚಂದ್ರ ಘಾಟ್ ಹತ್ತಿರ ಬಹುತೇಕವಾಗಿ ಬಡವರು, ದುಡಿಯುವ ಜನರೇ ವಾಸವಾಗಿದ್ದು, ಹಲವು ಮೂಲಭೂತ ಸೌಕರ್ಯದ ಕೊರತೆಯಿಂದ ಶೋಚನೀಯ ಪರಿಸ್ಥಿತಿಗೆ ಒಳಗಾಗಿದ್ದಾರೆ. ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ಕೆಟ್ಟ ಪರಿಸ್ಥಿತಿ ಉಂಟಾಗಿದೆ ಹಾಗೂ ಸಮರ್ಪಕ ರಸ್ತೆ ಇಲ್ಲದೆ ಸಾರ್ವಜನಿಕರಿಗೆ ಅತೀವ ತೊಂದರೆಯಾಗಿದೆ. ಸಾಕμÀ್ಟು ಜನರು ಬಿದ್ದು ಗಾಯ ಮಾಡಿಕೊಂಡಿದ್ದಾರೆ, ಅಪಘಾತಕ್ಕೀಡಾಗಿದ್ದಾರೆ. ಇದಲ್ಲದೆ ಬೀದಿ ದೀಪಗಳಿಲ್ಲದೆ ರಾತ್ರಿ ಓಡಾಡಲು ಸಾಧ್ಯವೇ ಇಲ್ಲದಂತಾಗಿದೆ. ಇನ್ನೂ ಉರ್ದು ಶಾಲೆ ಹತ್ತಿರವಿರುವ ಕಸದ ರಾಶಿ, ದುರ್ನಾತ ಬೀರುವ ಹೊರಚರಂಡಿ, ಶಾಲೆಯ ಶೈಕ್ಷಣಿಕ ವಾತಾವರಣವನ್ನೇ ಹಾಳು ಮಾಡಿವೆ. ಒಂದು ವಾರದಲ್ಲೇ ಟಾರ್ ರಸ್ತೆ ನಿರ್ಮಿಸಲು ತಗಲುವ ವೆಚ್ಚವನ್ನು ಅಂದಾಜು ಮಾಡಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಭರವಸೆಯಿತ್ತರು ಹಾಗೂ ಇನ್ನು 2-3 ದಿನಗಳಲ್ಲಿ ಉರ್ದು ಸ್ಕೂಲ್ ಬಳಿಯಿರುವ ಕಸವನ್ನು ವಿಲೇವಾರಿ ಮಾಡುವುದಾಗಿ ಹಾಗೂ ಬೀದಿ ದೀಪಗಳನ್ನು ಅಳವಡಿಸುವ ಕುರಿತು ಮಾತನಾಡಿದರು. ನಂತರ ಮುಸ್ತಫಾ ನಗರಕ್ಕೆ ಆಗಮಿಸಿ ದುರ್ನಾತ ಬೀರುವ ಕಸ ಹಾಗೂ ಹಾಳಾದ ರಸ್ತೆಯನ್ನು ವೀಕ್ಷಿಸಿ, ಅತೀ ಶೀಘ್ರದಲ್ಲೇ ಈ ಸಮಸ್ಯೆಗಳನ್ನು ಬಗೆಹರಿಸುತ್ತೆವೆಂದು ಜನಗಳಿಗೆ ಭರವಸೆಯಿತ್ತರು.
ಈ ಸಂದರ್ಭದಲ್ಲಿ ನಗರ ಸ್ಥಳೀಯ ಸಮಿತಿಯ ಕಾರ್ಯದರ್ಶಿಗಳಾದ ಡಾ.ಪ್ರಮೋದ್ ರವರು ಮಾತನಾಡುತ್ತಾ " ಇಂದು ಯಾವುದೇ ಸರ್ಕಾರಗಳೇ ಆಗಿರಲಿ, ಕಾಪೆರ್Çರೇಟ್ ಹಿತಾಸಕ್ತಿಗಳನ್ನು ಕಾಪಡುತ್ತಿವೆಯೇ ಹೊರತು ,ಜನಗಳ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಸ್ವಾತಂತ್ರ್ಯ ಬಂದು 74 ವರ್ಷಗಳು ಕಳೆದರೂ, ಕುಡಿಯುವ ನೀರು, ರಸ್ತೆ , ಒಳಚರಂಡಿ ವ್ಯವಸ್ಥೆಗಳಿಗೆ ಪರದಾಡುವ ಪರಿಸ್ಥಿತಿ ಬಂದಿದೆ. ಹಾಗಾಗಿ ಜನಗಳು ಒಗ್ಗಟ್ಟಾಗಿ ಹೋರಾಟ ಮಾಡುವುದೊಂದೇ ನಮ್ಮ ಮುಂದಿನ ದಾರಿ ಎಂದು ಹೇಳುತ್ತಾ ಹೋರಾಟಕ್ಕೆ ಕರೆ ನೀಡಿದರು.
ಪ್ರತಿಭಟನೆಯಲ್ಲಿ ನಗರ ಸ್ಥಳೀಯ ಸಮಿತಿಯ ಸದಸ್ಯ ಗೋವಿಂದ್, ಸೌಮ್ಯ. ಜೆ, ಸಂಘಟನೆಯ ಕಾರ್ಯಕರ್ತರಾದ ರೇಖಾ, ವಿದ್ಯಾ, ಉಮಾ, ಶಾಂತಿ, ನಿಂಗರಾಜು, ರೇವಣ ಸಿದ್ದೇಶ್ವರ, ನಿಹಾರಿಕ ಮತ್ತು ಮುಸ್ತಫಾ ನಾಗರೀಕ ಹೋರಾಟ ಸಮಿತಿ ಸದಸ್ಯರುಗಳಾದ ಶರ್ಮಾಸ್, ಶಬ್ಬೀರ್, ಖಾನ್ ಸಾಬ್ ಹಾಗೂ ಏರಿಯಾದ ನಾಗರಿಕರು ಸೇರಿ ಸುಮಾರು 300 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.