ಹಗರಿಬೊಮ್ಮನಹಳ್ಳಿ

ಕಚೇರಿಗಳಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ಮಾಸ್ಕ್ ಕಡ್ಡಾಯ

ಕಚೇರಿಗಳಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ಮಾಸ್ಕ್ ಕಡ್ಡಾಯ

ಹಗರಿಬೊಮ್ಮನಹಳ್ಳಿ 30: ಪಟ್ಟಣದ ತಾಲೂಕು ಪಂಚಾಯತಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸೋಮವಾರ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕೋವಿಡ್-19 ಟಾಸ್ಕ್ ಫೋರ್ಸ್ ಸಮಿತಿಯಿಂದ ಸಭೆ ಜರುಗಿತು.

ವಿಎ, ಆರ್‍ಐ, ಪಿಡಿಒ ನೇರ ಹೊಣೆ: ಗ್ರಾಮಾಂತರ ಪ್ರದೇಶಗಳಲ್ಲಿ ಕೋವಿಡ್ ಕೇಸ್ಗಳು ಕಂಡುಬಂದಲ್ಲಿ ವಿಎ,ಪಿಡಿಒ ಗಾಗೂ ಆರೈಗಳನ್ನು ನೇರ ಹೊಣೆ ಮಾಡಲಾಗುವುದು ಹಾಗೂ ಕಾನೂನಾತ್ಮಕವಾಗಿ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ಶರಣಮ್ಮ ಖಡಕ್ ವಾರ್ನಿಂಗ್ ಅಧಿಕಾರಿಗಳಿಗೆ ನೀಡಿದರು.

ಮಾಸ್ಕ್ ಧರಿಸದಿದ್ದರೆ ದಂಡ ವಸೂಲಿ: ಪ್ರತಿಯೊಂದು ಇಲಾಖೆಯವರು ಕೋವಿಡ್ ಜಾಗೃತಿ ಕಾರ್ಯದಲ್ಲಿ ತೊಡಗಬೇಕು, ಮುಖ್ಯವಾಗಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಸೇರಿದಂತೆ,ಪುರಸಭೆಯು ಎಚ್ಚರಿಕೆ ವಹಿಸಬೇಕು, ತಾಲೂಕಾಡಳಿತ,ಪೋಲೀಸ್ ಇಲಾಖೆ,ಪುರಸಭೆಯವರು ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದವರಿಂದ ದಂಡ ವಸೂಲಾತಿ ಮಾಡುವಂತೆ ತಹಶೀಲ್ದಾರ್ ತಿಳಿಸಿದರು.

ಅಂಗಡಿ ಮುಂಗಟ್ಟುಗಳಿಗೆ ನೋಟೀಸ್: ಸ್ಯಾನಿಟೈಸರ್ ಸೇರಿದಂತೆ ಮಾಸ್ಕ್ ಕಡ್ಡಾಯವಾಗಿ ಧರಿಸಿ ವ್ಯಾಪಾರ ವಹಿವಾಟು ನಡೆಸಬೇಕು, ಅಂಗಡಿಗೆ ಬರುವವರಿಗೂ ಮಾಸ್ಕ್ ಧರಿಸುವಂತೆ ತಿಳಿಸಿ ಮುಂಜಾಗ್ರಾತಾ ಕ್ರಮಗಳನ್ನು ಪಾಲಿಸುವಂತೆ ಪುರಸಭೆಗೆ ತಿಳಿಸಲಾಯಿತು.

ಸಭೆಯಲ್ಲಿ ಮಾಸ್ಕ್ ಧರಿಸದ ಅಧಿಕಾರಿಗಳಿಗೆ 100 ದಂಡ: ಸಭಾಂಗಣದಲ್ಲಿ ಮಾಸ್ಕ್ ಧರಿಸದೇ ಸಭೆಗೆ ಹಾಜರಾದ ನಾಲ್ಕು ಅಧಿಕಾರಿಗಳಿಗೆ ಸ್ಥಳದಲ್ಲಿಯೆ 100ರೂ ದಂಡ ವಿಧಿಸುವಂತೆ ಸೂಚಿಸಿದರು.

ಸಂಜೆ 5 ಗಂಟೆಗೆ ದಂಡದ ವಸೂಲಾತಿಯ ಮಾಹಿತಿ ನೀಡಿ : ದಂಡ ವಿಧಿಸಿದ ಇಲಾಖೆಗಳು ಸಂಪೂರ್ಣ ಮಾಹಿತಿಯನ್ನು ಸಂಜೆ 5ಗಂಟೆಯೊಳಗೆ ತಾಲೂಕಾ ದಂಡಾಧಿಕಾರಿಗಳ ಕಛೇರಿಗೆ ಮಾಹಿತಿ ನೀಡಬೆಕು.

80% ಲಸಿಕೆ ಪೂರ್ಣ: ತಾಲೂಕಿನಾದ್ಯಾಂತ 60ವರ್ಷ ಮೇಲ್ಪಟ್ಟವರಲ್ಲಿ ಶೇಕಡ 80%ಲಸಿಕೆ ಪೂರ್ಣಗೊಂಡಿದೆ, ವ್ಯಾಕ್ಸಿನ್ ಕೊರತೆ ಮುಮದಿನ ವಾರದಲ್ಲಿ ನೀಗಲಿದ್ದು ಬಿಎಲ್‍ಒಗಳಿಂದ ಮಾಹಿತಿ ಪಡೆದು 45ವರ್ಷದ ಮೇಲ್ಪಟ್ಟವರಿಗೂ ವ್ಯಾಕ್ಸಿನ್ ನೀಡಲಾಗುವುದು, ಎಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಆದೇಶದನ್ವಯ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡು ಲಸಿಕೆ ನೀಡುವಂತೆ ಸೂಚಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಶಿವರಾಜ್ ತಿಳಿಸಿದರು.

ಇನ್ನುಳಿದಂತೆ ಸರಕಾರದಿಂದ ಮಾಸ್ಕ್ ಕೊರತೆಯಾಗದಂತೆ ನಿಭಾಯಿಸಲು ಯಾರಾದರೂ ದಾನಿಗಳು ಮಾಸ್ಕ್‍ಗಳನ್ನು ದಾನ ಮಾಡಲು ಮುಂದಾದರೆ ಅವರಿಗೆ ತಾಲೂಕಾಡಳಿತ ಸ್ವಾಗತ ಕೋರುತ್ತದೆ ಎಂದು ತಹಶೀಲ್ದಾರ್ ಶರಣಮ್ಮ ತಿಳಿಸಿದರು.

ಶಿಕ್ಷಣ ಇಲಾಖೆಯಿಂದ ಮಾಹಿತಿ ಬಂದಿಲ್ಲ: ಗುರುಭವನದಲ್ಲಿ ನಡೆದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಿಂದ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆಯಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು ಇದಕ್ಕೆ ತಹಶೀಲ್ದಾರ್ ಪ್ರತಿಕ್ರಿಯೆ ನೀಡಿ  ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಇನ್ನು ಮಾಹಿತಿ ನೀಡಿಲ್ಲ, ಸ್ಪಷ್ಠೀಕರಣ ನೀಡಿದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಇಒ ಹಾಲಸಿದ್ದಪ್ಪ ಪೂಜೇರಿ, ತೋಟಗಾರಿಕಾ ಇಲಾಖೆ ಅಧಿಕಾರಿ ಪರಮೇಶ್ವರಪ್ಪ, ಸಿಡಿಪಿಒ ಚನ್ನಪ್ಪ,ಪುರಸಭೆ ಅಧಿಕಾರಿ ಜಯಲಕ್ಷೀ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಸುದ್ದಿ ಓದಿ