ಹುನಗುಂದ

ಅಂಗನವಾಡಿ ಕಾರ್ಯಕರ್ತೆಯರಗೆ ಮಾಸ್ಕ್‌, ಸ್ಯಾನಿಟೈಸರ್ ವಿತರಣೆ

ಅಂಗನವಾಡಿ ಕಾರ್ಯಕರ್ತೆಯರಗೆ ಮಾಸ್ಕ್‌, ಸ್ಯಾನಿಟೈಸರ್ ವಿತರಣೆ

ಹುನಗುಂದ 25:  ಕೊರೊನಾ ಎರಡನೆಯ ಅಲೆಯ ನಿಯಂತ್ರಣಕ್ಕಾಗಿ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ ಮನೆಗಳಿಗೆ ತೆರಳಿ ಸೋಂಕಿನ ಕುರಿತು ಸರ್ವೆ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಕಷ್ಟವನ್ನು ಕಂಡು ಅವರ ಸುರಕ್ಷತೆಗಾಗಿ ಪಟ್ಟಣದ 2003 ನೆಯ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ವಿದ್ಯಾರ್ಥಿಗಳ ಬಳಗ ಮಾಸ್ಕ್‌, ಸ್ಯಾನಿಟೈಸರ್ ಹಾಗೂ ಪೇಸ್ ಶೀಲ್ಡ್‌ಗಳನ್ನು ನೀಡಿದ್ದು ನಿಜಕ್ಕೂ ಶ್ಲಾಘನೀಯ ಎಂದು ತಹಶೀಲ್ದಾರ ಶ್ವೇತಾ ಬಿಡಿಕರ ಹೇಳಿದರು.                                                   ನಗರದ ತಹಶೀಲ್ದಾರ ಕಚೇರಿ ಸಭಾ ಭವನದಲ್ಲಿ ಪಟ್ಟಣದ 2003 ನೆಯ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ವಿದ್ಯಾರ್ಥಿಗಳ ಬಳಗ ಕೊಡಮಾಡಿದ ಮಾಸ್ಕ್‌, ಸ್ಯಾನಿಟೈಸರ್ ಹಾಗೂ ಪೇಸ್ ಶೀಲ್ಡ್‌ಗಳನ್ನು ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಅಂಗನವಾಡಿ ಸುಪರ್‌ವೈಜರ್‌ಗಳಿಗೆ ವಿತರಿಸಿ ಮಾತನಾಡಿದರು.  

ಕೋವಿಡ್ 19 ಅತ್ಯಂತ ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಯಾವುದೇ ಸುರಕ್ಷತೆಯಿಲ್ಲದೆ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಸ್ಥಿತಿಯನ್ನು ಮನಗಂಡ ಈ ವಿದ್ಯಾರ್ಥಿ ಬಳಗದ ಸ್ನೇಹಿತರು ಸೇರಿಕೊಂಡು 500 ಎನ್‌-95 ಮಾಸ್ಕ್‌, 500 ಸ್ಯಾನಿಟೈಸರ್, 500 ಪೇಸ್ ಶೀಲ್ಡ್‌ ನೀಡಿದ್ದು ಅವರಿಗೆ ತಾಲೂಕಾಡಳಿತದ ಪರವಾಗಿ ಅಭಿನಂದನೆ ತಿಳಿಸಿದರು.       

ತಾ.ಪಂ ಇಒ ಸಿ.ಬಿ. ಮ್ಯಾಗೇರಿ ಮಾತನಾಡಿ ಕೊರೊನಾ ನಿಯಂತ್ರಣದ ಕಾರ್ಯದಲ್ಲಿ ಗ್ರಾಮೀಣ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸಗಳಾದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸುರಕ್ಷತೆಗಾಗಿ ನೀಡಿದ ಎನ್‌.95 ಮಾಸ್ಕ್‌ ಸಾಮಾನ್ಯರ ಕೈಯಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ ಅಂತಹ ಗುಣಮಟ್ಟದ ಮಾಸ್ಕ್‌ಗಳನ್ನು ಈ ವಿದ್ಯಾರ್ಥಿಗಳ ಬಳಗ ನೀಡಿದ ಸಾಮಗ್ರಿಗಳನ್ನು ಸರಿಯಾಗಿ ಸಧ್ಬಳಕೆ ಮಾಡಿಕೊಳ್ಳಬೇಕು ಎಂದರು.                                                               

ಸಿಪಿಐ ಅಯ್ಯನಗೌಡ ಪಾಟೀಲ ಮಾತನಾಡಿ ಹಳ್ಳಿಗಳಲ್ಲಿ ಕೆಲಸ ಮಾಡುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಸರಿಯಾಗಿ ಪ್ರತಿದಿನ ತಾಲೂಕಾ ಆಡಳಿತ, ಆರೋಗ್ಯ ಇಲಾಖೆಗೆ ಮಾಹಿತಿ ನೀಡಿಬೇಕು. ಹಳ್ಳಿಗಳ ಸುರಕ್ಷತೆ ಜತೆಗೆ ನೀವು ಜಾಗೃತರಾಗಿ ನಿಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಬೇಕು ಎಂದರು.              ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಅಶೋಕ ಪಾಟೀಲ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ, ವಿದ್ಯಾರ್ಥಿಗಳ ಬಳಗದ ಮುಖಂಡರಾದ ಬಸವರಾಜ ಹೊಸೂರ, ಹರ್ಷದ್ ನಾಯಕ, ಮುತ್ತು ಹಿರೇಮನಿ, ಉಮೇಶ ಕಡೇಮನಿ, ಶ್ರೀನಿವಾಸ ಬಡಿಗೇರ, ಮಹಮ್ಮದ ಭಾವಿಕಟ್ಟಿ, ರಾಘು ವಡ್ಡರ, ಶಿವರಾಜ ತೋಟಗೇರಿ, ವನಜಾಕ್ಷಿ ಪಟ್ಟದಕಲ್ಲ, ನಾಗರಾಜ ಹುನಗುಂದ, ಸಂಗಮೇಶ ತಾವರಿಗೇರಿ, ಬಲವಂತ ನಾಯ್ಕೋಡಿ, ನಾಗರಾಜ ತಟ್ಟಿಮನಿ, ಮಂಜು ಮೇಲಿನಮನಿ ಹಾಗೂ ಅಂಗನವಾಡಿ ಸುಪರ್‌ವೈಜರ್ ಸೇರಿದಂತೆ ಅನೇಕರು ಇದ್ದರು. 

2003ರ ಎಸ್‌.ಎಸ್‌.ಎಲ್‌.ಸಿ ಸ್ನೇಹಿತರ ಬಳಗದಿಂದ ಕೊರೊನಾ ವಾರಿಯರ್ಸ್‌ಗಳಾದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಒಂದು ಒಳ್ಳೆಯ ಕಾರ್ಯ ಮಾಡುತ್ತಿದ್ದು ಅವರ ಮತ್ತು ಅವರ ಕುಟುಂಬಗಳು ಸುರಕ್ಷಿತವಾಗಿರಲಿ ಎನ್ನುವ ದೃಷ್ಠಿಯಿಂದ ನಮ್ಮ ಸ್ನೇಹ ಬಳಗದಿಂದ ಮಾಸ್ಕ್‌, ಸ್ಯಾನಿಟೈಸರ್, ಪೇಸ್ ಮಾಸ್ಕ್‌ಗಳನ್ನು ನೀಡಲಾಗಿದೆ.  

-ಶ್ರೀನಿವಾಸ ಬಡಿಗೇರ ವಿದ್ಯಾರ್ಥಿ ಬಳಗದ ಮುಖಂಡ 


ಸುದ್ದಿ ಓದಿ