ಮುಂದಗೋಡ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಮಾಸ್ಕ್‌ ವಿತರಣೆ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ  ಮಾಸ್ಕ್‌ ವಿತರಣೆ

ಮುಂಡಗೋಡ 15:  ಜುಲೈ 19 ರಿಂದ ನಡೆಯಲಿರುವ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಹಾಜರಾಗುವ ಮಕ್ಕಳು ಹಾಗೂ ಸಿಬ್ಬಂದಿಗಳಿಗೆ ರಾಜ್ಯ ಸರಕಾರಿ ನೌಕರ ಸಂಘದ ತಾಲೂಕು ಸಮಿತಿ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಸ್ಕ್‌ ವಿತರಿಸಲಾಯಿತು 

ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 1440 ಮಕ್ಕಳು ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಬರೆಯಲಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೂ ಸಹಿತ ಮಾಸ್ಕ್‌ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ ನಡುವಿನಮನಿ, ನೌಕರ ಸಂಘದ ಅಧ್ಯಕ್ಷ ದಯಾನಂದ ನಾಯ್ಕ, ಕಾರ್ಯದರ್ಶಿ ಗಣೇಶ, ಕೋಶಾಧ್ಯಕ್ಷೆ ವೀಣಾ ರಾಥೋಡ, ವಸಂತ ರಾಥೋಡ, ಸುರೇಶ ಪೂಜಾರ, ಸುಭಾಸ ಡೋರಿ, ಹನುಮಂತ ತಳವಾರ, ನಾಗರಾಜ ನಾಯ್ಕ, ಅಶೋಕ ಗುಡಿಸಾಗರ, ರಝಿಯಾ ಬೇಗ್, ಗದಿಗೆಪ್ಪ, ಪ್ರಶಾಂತ ಸಾವಳಗಿ ಮುಂತಾದವರು ಉಪಸ್ಥಿತರಿದ್ದರು. 

ಸುದ್ದಿ ಓದಿ