ಮೀ ಟೂ ಚಳುವಳಿಯಿಂದ ಹಲವಾರು ದೌರ್ಜನ್ಯಗಳು ಬೆಳಕಿಗೆ: ಪಿ.ವಿ. ಸಿಂಧು
ಮೀ ಟೂ ಚಳುವಳಿಯಿಂದಾಗಿ ಹಲವಾರು ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳು ಬೆಳಕಿಗೆ ಬಂದಿದೆ ಎಂದು ಅಗ್ರ ಮಹಿಳಾ ಬ್ಯಾಡ್ಮಿಂಟನ್ ಆಟಗಾತರ್ಿ ಪಿ.ವಿ. ಸಿಂಧು ಹೇಳಿದ್ದಾರೆ.
ಕಳೆದ ಹಲವಾರು ವಾರಗಳಿಂದ ದೇಶದ ಮೂಲೆ ಮೂಲೆಗಳಿಂದ ಮಹಿಳೆಯರು ತಾವು ಅನುಭವಿಸಿದ ನರಕ ಯಾತನೆಯನ್ನ ಅನುಭಗಳನ್ನ ಹಂಚಿಕೊಳ್ಳುತ್ತಿದ್ದಾರೆ.
ಮಾಜಿ ಬ್ಯಡ್ಮಿಂಟನ್ ಆಟಗಾತರ್ಿ ಜ್ವಾಲಾ ಗುಟ್ಟಾ ತಾವು ಅನುಭವಿಸಿದ ಹಿಂಸೆಯನ್ನ ಬಿಚ್ಚಿಟ್ಟಾಗ ಮತ್ತೋರ್ವ ಅಗ್ರ ಆಟಗಾತರ್ಿ ಪಿ.ವಿ.ಸಿಂಧು ಬೆಂಬಲಿಸಿದರು.
ಈ ಬಗ್ಗೆ ಸ್ವತಃ ಮಾತನಾಡಿರುವ ಸಿಂಧು, ಧೈರ್ಯವಾಗಿ ಬಂದು ಅನುಭವ ಹಂಚಿಕೊಂಡವರನ್ನ ನಾನು ಗೌರವಿಸುತ್ತೇನೆ. ನನಗೆ ಇದುವರೆಗೂ ದೌರ್ಜನ್ಯದಂತ ಅನುಭವಗಳು ಆಗಿಲ್ಲ. ನನ್ನ ಸೀನಿಯರ್ಸ್ ಮತ್ತು ಕೋಚ್ಗಳ ಬಗ್ಗೆ ನನಗೆ ಗೊತ್ತಿಲ್ಲ.ಇದುವರೆಗೂ ಒಳ್ಳೆಯ ಅನುಭವ ಪಡೆದಿದ್ದೇನೆ ಎಂದಿದ್ದಾರೆ.