ಅಧ್ಯಕ್ಷರಾಗಿ ಮಂಜುನಾಥ ಅವಿರೋಧ ಆಯ್ಕೆ
ಮುಂಡಗೋಡ:ಅಖಿಲ ಭಾರತ ವೀರಶೈವ ಮಹಾಸಭೆಯ ತಾಲೂಕು ಘಟಕದ ಅಧ್ಯಕ್ಷರಾಗಿ ಬಾಚಣಕಿ ಗ್ರಾಮದ ಮಂಜುನಾಥ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಸ್ಥಾನಕ್ಕೆ ಉಳಿದ ಅವಧಿಗೆ ಜೂ.26ರಂದು ಚುನಾವಣೆ ದಿನಾಂಕ ಘೋಷಣೆಯಾಗಿತ್ತು. ಜೂ.11ರಂದು ಮಧ್ಯಾಹ್ನ 3ಗಂಟೆವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜರುಗಿತು. ಜೂ.12ರಂದು ನಾಮಪತ್ರ ಪರೀಶೀಲನೆ ನಡೆಯಿತು. ಜೂ.15ರಂದು ನಾಮಪತ್ರ ಹಿಂಪಡೆಯಲಾಯಿತು. ಚುನಾವಣಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಂಜುನಾಥ ಪಾಟೀಲ ಅವರ ಒಂದೇ ನಾಮಪತ್ರ ಉಳಿದ ಕಾರಣ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು ಎಂದು ತಾಲೂಕು ಘಟಕದ ಸಹಾಯಕ ಚುನಾವಣಾ ಅಧಿಕಾರಿ ಎಸ್.ಬಿ.ಹೂಗಾರ ತಿಳಿಸಿದರು. ಈ ವೇಳೆ ಉಮೇಶ ಬಿಜಾಪುರ, ನಾಗಭೂಷಣ ಹಾವಣಗಿ, ಮಹೇಶ ಉಮ್ಮಚಗಿ ಮುಂತಾದವರಿದ್ದರು.